ಶುಕ್ರವಾರ, ಜೂನ್ 25, 2021
21 °C
ಬ್ಲಡ್ ಹೆಲ್ಪ್‌ಲೈನ್ ಸಹಕಾರ: ಪುತ್ತೂರು ರೋಟರಿ ಬ್ಲಡ್‌ ಬ್ಯಾಂಕ್‌ನಲ್ಲಿ ಚಾಲನೆ

ಯುವ ಕಾಂಗ್ರೆಸ್‌: ರಕ್ತದಾನ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ಬ್ಲಾಕ್ ಯುವ ಕಾಂಗ್ರೆಸ್ ಹಾಗೂ ಬ್ಲಡ್ ಹೆಲ್ಪ್‌ಲೈನ್‌ ಕರ್ನಾಟಕ ಸಂಘಟನೆಯ ಸಹಕಾರದಲ್ಲಿ ನಿರಂತರವಾಗಿ ನಡೆಸಲು ಉದ್ದೇಶಿಸಿರುವ ರಕ್ತದಾನ ಅಭಿಯಾನಕ್ಕೆ ಸೋಮವಾರ ಇಲ್ಲಿನ ರೋಟರಿ ಬ್ಲಡ್ ಬ್ಯಾಂಕ್‌ನಲ್ಲಿ ಚಾಲನೆ ನೀಡಲಾಯಿತು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ ಮಾತನಾಡಿ, ‘ಕೋವಿಡ್ ಅಟ್ಟಹಾಸದ ನಡುವೆ ಜನರು ಆಮ್ಲಜನಕ, ವೆಂಟಿಲೇಟರ್, ಹಾಸಿಗೆ ಸಿಗದೆ ಸಾಯುತ್ತಿದ್ದಾರೆ. ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಈ ಸಂದರ್ಭದಲ್ಲಿ ಕೋವಿಡ್ ಬಾಧಿತರು ಹಾಗೂ ಇನ್ನಿತರ ರೋಗಿಗಳು ರಕ್ತದ ಕೊರತೆಯಿಂದ ಸಮಸ್ಯೆಗೆ ಒಳಗಾಗಬಾರದೆಂದು ನಡೆಸುತ್ತಿರುವ ಶಿಬಿರ ಶ್ಲಾಘನೀಯ’ ಎಂದರು.

ಪುತ್ತೂರು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಮಾತನಾಡಿ, ‘ಈ ರಕ್ತದಾನ ಅಭಿಯಾನವು ನಿರಂತರವಾಗಿ ನಡೆಯಲಿದೆ. ತುರ್ತು ರಕ್ತದ ಅವಶ್ಯಕತೆ ಇದ್ದಲ್ಲಿ ಯುವ ಕಾಂಗ್ರೆಸ್ ಸದಸ್ಯರು ಸಿದ್ಧರಾಗಿದ್ದಾರೆ’ ಎಂದರು.

ನಗರಸಭೆ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ರೋಟರಿ ಅಧ್ಯಕ್ಷ ಗ್ಸೇವಿಯಾರ್ ಡಿಸೋಜ, ಬ್ಲಾಕ್ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ
ಗಣೇಶ್ ಶೆಟ್ಟಿ, ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಯುವಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸನದ್ ಯೂಸುಫ್, ಗ್ರಾಮ ಪಂಚಾಯಿತಿ ಸದಸ್ಯರಾದ ಕಮಲೇಶ್ ಸರ್ವದೋಳಗುತ್ತು, ಹಂಝತ್ ಸಾಲ್ಮರ, ಮೋನು ಬಪ್ಪಳಿಗೆ, ಇಂಮ್ತಿಯಾಝ್ ಬಪ್ಪಳಿಗೆ, ಹನೀಫ್ ಪುಂಚತ್ತಾರು, ರಶೀದ್ ಮುರ, ರವಿಚಂದ್ರ ಆಚಾರ್ಯ, ಇಫಾಝ್ ಇದ್ದರು.

ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಕೆಸಿ ಅಶೋಕ್ ಶೆಟ್ಟಿ, ಜಗದೀಶ್ ಕಜೆ, ಶಮೀಮ್ ಗಾಳಿಮುಖ, ಇರ್ಫಾಝ್‌, ಶರತ್, ಮಹಮ್ಮದ್ ಅಶ್ರಫ್, ಜಿತೇಶ್ ರಕ್ತದಾನ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.