ಬುಧವಾರ, ಜೂನ್ 3, 2020
27 °C

ಎಂಎಸ್‍ಎಂಇಗಳಿಗೆ ಬಿಓಬಿ ವಿಶೇಷ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ವಿಲೀನಗೊಂಡಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ದೇಶದಾದ್ಯಂತ ಇರುವ ಎಂಎಸ್‍ಎಂಇ ಸಾಲಗಾರರನ್ನು ವೆಬಿನರ್ ಮೂಲಕ ಸಂಪರ್ಕಿಸುವ ವಿಶಿಷ್ಟ ಕ್ರಮವನ್ನು ಬ್ಯಾಂಕ್ ಆಫ್ ಬರೋಡ್ ಗುರುವಾರ ಆಯೋಜಿಸಿತ್ತು.

ದೇಶದ ವಿವಿಧೆಡೆಗಳ 49 ಸಾವಿರಕ್ಕೂ ಹೆಚ್ಚು ಎಂಎಸ್‍ಎಂಇ ಸಾಲಗಾರರು ಭಾಗವಹಿಸಿ. ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ವಿಕ್ರಮಾದಿತ್ಯ ಸಿಂಗ್ ಖಿಚಿ ಅವರಿಂದ ಮಾರ್ಗದರ್ಶನ ಪಡೆದರು. ಸಂಕಷ್ಟಕ್ಕೀಡಾಗಿರುವ ಎಂಎಸ್‍ಎಂಇ ವಲಯಕ್ಕೆ ಬೆಂಬಲವಾಗಿ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ಮಾಹಿತಿಯನ್ನೂ ನೀಡಲಾಯಿತು.

ವಿಶೇಷ ಕೋವಿಡ್ ತುರ್ತು ಸಾಲ ಯೋಜನೆ, ಸಾಲದ ಕಂತು ಮುಂದೂಡಿಕೆ, ಬಡ್ಡಿ ಪಾವತಿ ಮುಂದೂಡಿಕೆ, ಸಾಲ ಮಿತಿಗಳ ಮರು ಮೌಲ್ಯಮಾಪನ ಮತ್ತು ಸಾಲಗಳ ಮರು ಹೊಂದಾಣಿಕೆಯಂಥ ಕ್ರಮಗಳ ಮೂಲಕ ಎಂಎಸ್‍ಎಂಇಗಳಿಗೆ ನೆರವು ನೀಡಲಾಗುತ್ತದೆ ಎಂದು ವಿಕ್ರಮಾದಿತ್ಯ ಸಿಂಗ್‌ ಹೇಳಿದರು.

ಈ ಸಂಕಷ್ಟದಿಂದ ಪಾರಾಗಲು ಈ ಸೌಲಭ್ಯಗಳನ್ನು ಎಂಎಸ್‍ಎಂಇಗಳು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಮಾರ್ಗಸೂಚಿ, ಮತ್ತು ಸಲಹೆ- ಮಾರ್ಗದರ್ಶನ ನೀಡಲಾಯಿತು. ಸುಮಾರು 22 ಸಾವಿರ ಪ್ರಶ್ನೆಗಳನ್ನು ಈ ಸಂವಾದದಲ್ಲಿ ಚಾಟ್ ಬಾಕ್ಸ್ ಮೂಲಕ ಬ್ಯಾಂಕ್ ಸ್ವೀಕರಿಸಿದೆ ಎಂದು ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು