ಶುಕ್ರವಾರ, ಜೂನ್ 25, 2021
21 °C

ನೇತ್ರಾವತಿ ಸೇತುವೆ ಮೇಲೆ ಕಾರು–ರಿಕ್ಷಾ ಡಿಕ್ಕಿ: ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಳ್ಳಾಲ (ದಕ್ಷಿಣ ಕನ್ನಡ): ಇಲ್ಲಿನ ನೇತ್ರಾವತಿ ಸೇತುವೆಯಲ್ಲಿ ಶನಿವಾರ ಬೆಳಿಗ್ಗೆ ಕಾರು ಮತ್ತು ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ, ಪಜೀರು ಸೇನೆರೆಬೈಲು ಶ್ಯಾಮಪ್ರಸಾದ್ (45) ಮೃತಪಟ್ಟಿದ್ದಾರೆ.

ಅವರು ಮಂಗಳೂರಿನಿಂದ ವಾಪಸ್ ಬರುವ ಸಂದರ್ಭದಲ್ಲಿ ರಿಕ್ಷಾ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದಿದೆ. ಆಗ ರಿಕ್ಷಾದಿಂದ ಚಾಲಕ ಹೊರಗೆಸೆಯಲ್ಪಟ್ಟು, ಅವರ ಮೇಲೆ ಕಾರು ಚಲಿಸಿದೆ. ಅಸೈಗೋಳಿಯ ತಂಗುದಾಣದಲ್ಲಿ ಅವರು ರಿಕ್ಷಾವನ್ನು ಬಾಡಿಗೆಗೆ ನಿಲ್ಲಿಸುತ್ತಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು