ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತ್ತೆತ್ತೂರು: ರಾಸಾಯನಿಕ ಸೋರಿಕೆ?

Published 25 ಜುಲೈ 2023, 20:41 IST
Last Updated 25 ಜುಲೈ 2023, 20:41 IST
ಅಕ್ಷರ ಗಾತ್ರ

ಮಂಗಳೂರು: ಕುತ್ತೆತ್ತೂರು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಕಚೇರಿ ಬಳಿ ದುರ್ವಾಸನೆಯುಕ್ತ ದ್ರವ ರಾಸಾಯನಿಕವು ಚರಂಡಿಗೆ ಮಂಗಳವಾರ ರಾತ್ರಿ ಸೋರಿಕೆಯಾಗಿದೆ.

ಎಂಆರ್ ಪಿಎಲ್‌ ಸಮೀಪದಲ್ಲೇ ರಾಸಾಯನಿಕ ಸೋರಿಕೆ ಆಗಿದ್ದು, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ‌.

'ರಾತ್ರಿ 8 ಗಂಟೆ ಸುಮಾರಿಗೆ ರಾಸಾಯನಿಕ ಸೋರಿಜೆ ಆಗಲು ಶುರುವಾಗಿದೆ. ಸೋರಿಕೆಯಾದ ರಾಸಾಯನಿಕವು ಅಮೋನಿಯಾ ಆಗಿರಬಹುದು' ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಬಂದ ಬೆನ್ನಲ್ಲೇ ಸುರತ್ಕಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

'ರಾಸಾಯನಿಕ ಸೋರಿಕೆಯಾಗಿರುವ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಇದೇ ಪರಿಸರದಲ್ಲಿ ಈ ಹಿಂದೆಯೂ ರಾಸಾಯನಿಕ ಸೋರಿಕೆ ಆಗಿತ್ತು. ಇದನ್ನು ಹೊರಗೆ ಹರಿಯಬಿಟ್ಟ ಕೈಗಾರಿಕೆ ಯಾವುದು ಎಂದು ಪತ್ತೆ ಹಚ್ಷಿ ಕಠಿಣ ಕ್ರಮ‌ ಕೈಗೊಳ್ಳಬೇಕು' ಎಂದು ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT