ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಫಿಝಾ ಬೈ ನೆಕ್ಸಸ್‌ನಲ್ಲಿ ಚಾಕೊಲೇಟ್ ಸ್ಟ್ರೀಟ್

Published 11 ಮೇ 2024, 13:20 IST
Last Updated 11 ಮೇ 2024, 13:20 IST
ಅಕ್ಷರ ಗಾತ್ರ

ಮಂಗಳೂರು: ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಷನ್ ಆಯೋಜಿಸಿರುವ ಐದನೇ ಆವೃತ್ತಿಯ ಚಾಕೊಲೇಟ್ ಸ್ಟ್ರೀಟ್ 2024 ಕಾರ್ಯಕ್ರಮವು ಶನಿವಾರ ನಗರದ ಫಿಝಾ ಬೈ ನೆಕ್ಸಸ್‌ನಲ್ಲಿ ಆರಂಭಗೊಂಡಿದೆ.

ಓಷಿಯನ್‌ ಪರ್ಲ್ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್‌ನ ಗುಂಪು ಕಲಿಕೆ ಮತ್ತು ಅಭಿವೃದ್ಧಿ ವ್ಯವಸ್ಥಾಪಕ ದುರೈ ಅರುಣ್ ಪ್ರಶಾಂತ್ ಸೆಲ್ವಂ ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬ್ರ್ಯಾಂಡಿಂಗ್ ವಿಭಾಗದ ಸಹಾಯಕ ನಿರ್ದೇಶಕ ರೋಷನ್ ಕೋಲಾರ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ದುರೈ, ‘ಚಾಕೊಲೇಟ್ ಕೇವಲ ಆಹಾರ ಉತ್ಪನ್ನವಲ್ಲ, ಅದೊಂದು ಭಾವನೆ, ಜೀವನದ ಅವಿಭಾಜ್ಯ ಅಂಗ. ಜೀವನ ಮೌಲ್ಯವು ಬದುಕಿಗೆ ಯಶಸ್ಸನ್ನು ತಂದುಕೊಡುತ್ತದೆ’ ಎಂದರು.

ರೋಷನ್ ಕೋಲಾರ ಮಾತನಾಡಿ, ‘ಚಾಕೊಲೇಟ್ ಒತ್ತಡ ನಿವಾರಿಸುವ ತಿನಿಸು. ಜೀವನಕ್ಕೆ ಚೇತೋಹಾರಿಯಾಗಿದೆ’ ಎಂದರು.

ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಷನ್ ಮುಖ್ಯಸ್ಥ ರವಿರಾಜ್ ಕಿಣಿ ಸ್ವಾಗತಿಸಿದರು. ಶೈಕ್ಷಣಿಕ ಆಯೋಜಕಿ ಅನಿಶಾ ನಿಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಆಯೋಜಕರಾದ ಮಾಳವಿಕಾ ನಾಯರ್ ಮತ್ತು ಬ್ರಿಯಾನ್ ಬಾನ್ಸ್ ಭಾಗವಹಿಸಿದ್ದರು. ಅಲ್ಕಾ ಸೀಕ್ವೇರಾ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT