ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮಮಾರ್ಗದಲ್ಲಿ ಧೈರ್ಯದಿಂದ ಮುನ್ನಡೆಯಿರಿ’

ಬಿಜೈ ಚರ್ಚ್‌ನಲ್ಲಿ ವಿಶೇಷ ಕ್ರಿಸ್‌ಮಸ್‌ ಕಾರ್ಯಕ್ರಮ
Last Updated 19 ಡಿಸೆಂಬರ್ 2020, 3:37 IST
ಅಕ್ಷರ ಗಾತ್ರ

ಮಂಗಳೂರು: ನಗರದ ಬಿಜೈನ ಸೇಂಟ್‌ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಆಶ್ರಯದಲ್ಲಿ ವಿಶೇಷ ಕ್ರಿಸ್‌ಮಸ್‌ ಸೌಹಾರ್ದ ಕೂಟ ಚರ್ಚ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆಯಿತು. ಕ್ರಿಸ್‌ಮಸ್‌ ಟ್ರೀಯ ದೀಪ ಬೆಳಗಿಸುವ ಮೂಲಕ ಚರ್ಚ್ ಪ್ರಧಾನ ಧರ್ಮಗುರು ಡಾ.ಜೆ.ಬಿ.ಸಲ್ಡಾನ ಮತ್ತು ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು.

ಡಾ.ಜೆ.ಬಿ. ಸಲ್ಡಾನ ಮಾತನಾಡಿ, ‘ಯೇಸುಸ್ವಾಮಿ ಯಾವಾಗಲೂ ನಮ್ಮೊಂದಿಗೆ ಇದ್ದಾನೆ ಎಂಬುದು ನಮ್ಮ ನಂಬಿಕೆ, ಯೇಸು ಸ್ವಾಮಿಯೇ ನಮ್ಮೊಂದಿಗಿದ್ದು ಕಾಪಾಡುತ್ತಾನೆ ಎನ್ನುವ ವಿಶ್ವಾಸದಲ್ಲಿ ನಾವು ಧರ್ಮ ಮಾರ್ಗದಲ್ಲಿ ಧೈರ್ಯದಿಂದ ಮುಂದುವರೆಯಬಹುದು’ ಎಂದು ಸಂದೇಶ ನೀಡಿದರು.

ಲಯನ್ಸ್ ವತಿಯಿಂದ 4 ವಾಕರ್‌ಗಳನ್ನು ವಿತರಿಸಿದ ಲಯನ್ಸ್ ಜಿಲ್ಲಾ 317 ಡಿ ಗವರ್ನರ್‌ ಡಾ.ಗೀತ್ ಪ್ರಕಾಶ್, ‘ಪ್ರೀತಿ ಯಾವಾಗಲು ನಮ್ಮಲ್ಲಿರಲಿ. ಶಾಂತಿ ಎಲ್ಲೆಡೆ ನೆಲೆಸಲಿ’ ಎಂದು ಹಾರೈಸಿದರು.

ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಶಶಿಧರ್ ಹೆಗ್ಡೆ, ಲ್ಯಾನ್ಸಿ ಲೆಟ್ ಪಿಂಟೊ, ಜಯಂತ್ ಅಂಚನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಲೂರ್ಡ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರಾಬರ್ಟ್ ಡಿಸೋಜ, ಚರ್ಚ್ ಸಹಾಯಕ ಧರ್ಮಗುರುಪ್ರಮೋದ್ ಕ್ರಾಸ್ತ, ವಿಶ್ವಾಸ್ ಜೋಯ್ ಮಿಸ್ಕಿತ್ ವೇದಿಕೆಯಲ್ಲಿದ್ದರು.

ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅಶೋಕ್ ಪಿಂಟೊ ಸ್ವಾಗತಿಸಿದರು. ರಾಬಿನ್ ಕುಟಿನೋ ನಿರೂಪಿಸಿದರು. ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಪ್ರೀತಿ ಗೋಮ್ಸ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT