ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಸ್ವಚ್ಛ ಸಾಗರ ಅಭಿಯಾನ

Last Updated 15 ಸೆಪ್ಟೆಂಬರ್ 2022, 13:14 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಕಲ್ಯಾಣ ಪರಿಷತ್ ಕರ್ನಾಟಕದ ನೇತೃತ್ವದಲ್ಲಿ ಸೆ.17ರಂದು ಬೆಳಿಗ್ಗೆ 7ರಿಂದ 11 ಗಂಟೆಯವರೆಗೆ ‘ಸ್ವಚ್ಛ ಸಾಗ ಸುರಕ್ಷಿತ ಸಾಗರ’ ಅಭಿಯಾನವು ಕಡಲತೀರದಲ್ಲಿ ನಡೆಯಲಿದೆ ಎಂದು ಸಂಘಟನೆಯ ಮಹಾನಗರ ಸಂಯೋಜಕ ಸತೀಶ್ ತಿಳಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಅಂತರರಾಷ್ಟ್ರೀಯ ಸಮುದ್ರದಂಡೆ ಸ್ವಚ್ಛತೆ ದಿನವಾದ ಸೆ.17ರಂದು ದೇಶದಾದ್ಯಂತ ಸುಮಾರು 7,500 ಕಿ.ಮೀ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ. ಇದರ ಭಾಗವಾಗಿ ನಮ್ಮ ಕರಾವಳಿಯಲ್ಲೂ ಸ್ವಚ್ಛತಾ ಕಾರ್ಯ ನಡೆಸಲಾಗುವುದು. ಮಿತ್ರ ಪಟ್ಟಣ ಮುಕ್ತ, ಎನ್‌ಐಟಿಕೆ, ದೊಡ್ಡಕೊಪ್ಪ, ಗುಡ್ಡೆಕೊಪ್ಪ, ಇಡ್ಯಾ, ಹೊಸಬೆಟ್ಟು, ಚಿತ್ರಾಪುರ, ಮೀನಕಳಿಯ, ಎನ್‌ಎಂಪಿಟಿ, ತಣ್ಣೀರುಬಾವಿ, ಬೇಂಗ್ರೆ ಹೀಗೆ ಒಟ್ಟು 11 ಪ್ರದೇಶಗಳನ್ನು ಗುರುತಿಸಲಾಗಿದ್ದು, ಸಾರ್ವಜನಿಕರು ಇಲ್ಲಿ ಬಂದು ಸೇರಿಕೊಳ್ಳಬೇಕು. ಜನರ ಸಹಭಾಗಿತ್ವ ಇದ್ದರೆ ಅಭಿಯಾನ ಯಶಸ್ವಿಯಾಗುತ್ತದೆ’ ಎಂದರು.

ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಪ್ಲೇ ಸ್ಟೋರ್‌ನಿಂದ Eco Mitram ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೈಗೆತ್ತಿಕೊಂಡಿರುವ ಪರಿಸರ ರಕ್ಷಣೆ ಕಾರ್ಯಕ್ಕೆ ಜನರು ಕೈಜೋಡಿಸಬೇಕು ಎಂದು ವಿನಂತಿಸಿದರು. ಸಂಘಟನೆಯ ಪ್ರಮುಖರಾದ ಚಂದ್ರಹಾಸ, ಪ್ರಮೋದ್ ಅಂಚನ್, ಮಾಧವ ಸುವರ್ಣ, ಸುಬೋಧಕುಮಾರ್, ಹರೀಶ್ ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT