ಶುಕ್ರವಾರ, ಜೂನ್ 18, 2021
27 °C
ಎಲ್ಲರಿಗೂ ಲಸಿಕೆ ನೀಡಿ: ಐವನ್ ಡಿಸೋಜ

ಕಾಂಗ್ರೆಸ್‌ನಿಂದ ಜನಾಂದೋಲನ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದೇಶದ ಜನರ ನೋವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ‘ನಮಗೆ ಉಚಿತ ಲಸಿಕೆ ಕೊಡಿ, ‘ಲಸಿಕೆಯನ್ನು ನಿಗದಿತ ಅವಧಿಯೊಳಗೆ ಕೊಡಿ’ ಎಂಬ ಜನಾಂದೋಲನವನ್ನು ಭಾನುವಾರ (ಮೇ 16) ಕಾಂಗ್ರೆಸ್‌ ಪ್ರಾರಂಭಿಸಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಹಳ್ಳಿಯಿಂದ ನವದೆಹಲಿಯವರೆಗೆ ಎಲ್ಲರಿಗೂ ಲಸಿಕೆ ಲಭ್ಯವಾಗಬೇಕು. ದೇಶದ 130 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡುವ ಘೋಷಣೆ ಮಾಡಿದ್ದ ಸರ್ಕಾರದ ಹೇಳಿಕೆ ಜನರಿಗೆ ನಿರಾಸೆ ಉಂಟುಮಾಡಿದೆ’ ಎಂದರು.

ಹಿಂದೆ ಕಾಂಗ್ರೆಸ್ ಸರ್ಕಾರ, ಪೋಲಿಯೊ, ಟಿ.ಬಿ ಕಾಯಿಲೆಗೆ ಉಚಿತ ಲಸಿಕೆ ನೀಡಿದಂತೆ, ಮನೆ–ಮನೆಗೆ ತೆರಳಿ, ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ಪ್ರಧಾನ ಮಂತ್ರಿ ಇದನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕೋವಿಡ್ ಹತೋಟಿಗೆ ತರಲು ಸಂಪೂರ್ಣ ಲಾಕ್‌ಡೌನ್ ಅಗತ್ಯವಿದೆ. ಅನೇಕ ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಔಷಧ, ಇಂಜೆಕ್ಷನ್, ಹಾಸಿಗೆ, ಆಮ್ಲಜನಕ ಸೇರಿದಂತೆ ಎಲ್ಲ ರೀತಿಯ ಕೊರತೆಗಳಿವೆ. ರಾಜ್ಯಪಾಲರು ಮಧ್ಯ ಪ್ರವೇಶಿಸಿ, ಸರ್ಕಾರವನ್ನು ಆಡಳಿತದಿಂದ ವಜಾ ಮಾಡಿ, ಜನರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಶಶಿಧರ್ ಹೆಗ್ಡೆ, ಮುಹಮ್ಮದ್ ಕುಂಜತ್ತ್‌ಬೈಲ್, ಜೆಸಿಂತಾ ವಿಜಯ್ ಆಲ್ಫ್ರೆಡ್, ವಿವೇಕ್ ರಾಜ್ ಪೂಜಾರಿ, ನಿತ್ಯಾನಂದ ಶೆಟ್ಟಿ, ಶೆರಿಲ್ ಅಯೋನಾ, ಚಿತ್ತರಂಜನ್ ಶೆಟ್ಟಿ, ಆರಿಫ್ ಬಾವಾ ಇದ್ದರು.

₹ 20 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ಸೆಂಟ್ರಲ್ ವಿಸ್ತ’ ಯೋಜನೆ ಹಣವನ್ನು 130 ಕೋಟಿ ಜನರ ರಕ್ಷಣೆಗೆ ಕೇಂದ್ರ ಸರ್ಕಾರ ಮೀಸಲಿಡಬೇಕು. ಐವನ್ ಡಿಸೋಜ ಎಐಸಿಸಿ ಕಾರ್ಯದರ್ಶಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.