ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆ ಖರೀದಿ ಟೆಂಡರ್‌ ರದ್ದತಿಗೆ ಆಗ್ರಹ

ಜಿಲ್ಲಾ ಕಾಂಗ್ರೆಸ್‌ ಪ್ರಮುಖರಿಂದ ಮಲ್ಲಿಕಟ್ಟೆಯಲ್ಲಿ ಪ್ರತಿಭಟನೆ
Last Updated 28 ಜುಲೈ 2021, 3:30 IST
ಅಕ್ಷರ ಗಾತ್ರ

ಮಂಗಳೂರು: ‘ಮಾತೃಪೂರ್ಣ’ ಯೋಜನೆಯಡಿ ಮೊಟ್ಟೆ ಖರೀದಿಗೆ ಸಂಬಂಧಿಸಿದಂತೆ ಅವ್ಯವಹಾರ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ನಗರದ ಮಲ್ಲಿಕಟ್ಟೆಯಲ್ಲಿ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ‘ಬಿಜೆಪಿ ಸರ್ಕಾರವು ಭ್ರಷ್ಟಾಚಾರದ ಕೂಪವಾಗಿದ್ದು, ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗರ್ಭಿಣಿಯರಿಗೆ ನೀಡಲಾಗುವ ಮೊಟ್ಟೆ ಖರೀದಿಯಲ್ಲೂ ಕಮಿಷನ್‌ಗೆ ಕೈಹಾಕಿದೆ. ಶಶಿಕಲಾ ಜೊಲ್ಲೆಯಂಥ ಭ್ರಷ್ಟಾಚಾರಿಗಳನ್ನು ಮತ್ತೆ ಬಿಜೆಪಿ ಸಂಪುಟಕ್ಕೆ ಸೇರಿಸಬಾರದು. ಟೆಂಡರ್ ಪ್ರಕ್ರಿಯೆಯನ್ನು ತಕ್ಷಣ ರದ್ದು ಮಾಡಿ ಅಕ್ರಮ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಐವನ್ ಡಿಸೋಜ, ಶಾಹುಲ್ ಹಮೀದ್, ಶಾಲೆಟ್ ಪಿಂಟೊ ಮಾತನಾಡಿದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪ್ರಮುಖರಾದ ಸದಾಶಿವ್ ಉಳ್ಳಾಲ್, ಪಿ.ಪಿ. ವರ್ಗೀಸ್, ಪದ್ಮನಾಭ ಅಮೀನ್, ಅಬ್ಬಾಸ್ ಅಲಿ, ಶುಭೋದಯ ಆಳ್ವ, ಬಿ.ಕೆ. ಇದಿನಬ್ಬ, ಶಬ್ಬೀರ್ ಎಸ್., ನೀರಜ್ ಪಾಲ್, ಟಿ.ಕೆ. ಸುಧೀರ್, ರಮಾನಂದ ಪೂಜಾರಿ, ಆರೀಫ್ ಬಂದರ್, ಪ್ರತಿಭಾ ಕುಳಾಯಿ, ಸರ್ವೋತ್ತಮ ಗೌಡ, ಲಾರೆನ್ಸ್ ಡಿಸೋಜ, ಅಬ್ದುಲ್ ಸತ್ತಾರ್ ಅಡ್ಯಾರ್, ಅಭಿಷೇಕ್ ಉಳ್ಳಾಲ್, ಸುಧೀರ್ ಕಡೇಕಾರ್, ಮೊಹಮ್ಮದ್ ಅಲಿ, ಮೊಹಮ್ಮದ್ ಶಮೀರ್ ಕಾಟಿಪಳ್ಳ, ಶೌಹಾದ್ ಗೂನಡ್ಕ, ಸ್ಟ್ಯಾನಿ ಆಳ್ವರಿಸ್, ಕಿರಣ್ ಜೇಮ್ಸ್, ಸರ್ಫಾಜ್ ಬಾಳ, ಹಸನ್ ಫಳ್ನೀರ್, ರಾಘವೇಂದ್ರ ರಾವ್, ಮುಹಮ್ಮದ್ ಬಪ್ಪಳಿಗೆ, ಅಪ್ಪಿ, ಮರಿಯಂ ಥೋಮಸ್, ಮಮತಾಗಟ್ಟಿ, ಶೋಭಾ ಪಡೀಲ್, ಶಾಂತಲಾ ಗಟ್ಟಿ, ಮಲ್ಲಿಕಾ ಪಕ್ಕಳ, ಟಿ.ಕೆ ಶೈಲಜಾ, ಸಂಜನಾ ಛಲವಾದಿ, ಗೀತಾ, ತನ್ವೀರ್ ಷಾ, ಚಂದ್ರಕಲಾ, ಚಂದ್ರಿಕಾ, ಮಂಜುಳಾ, ವಿದ್ಯಾ, ಶೆಲಿನ್, ಜಾಸಿಂ ಡಿಸೋಜ, ಮೀನಾ ಟೆಲ್ಲಿಸ್, ಜಯಂತಿ, ಮಲ್ಲಿಕಾ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT