ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರಕ್ಕೆ ವಿಶೇಷ ಪ್ರಮಾಣಪತ್ರ

Published 1 ಮೇ 2024, 13:59 IST
Last Updated 1 ಮೇ 2024, 13:59 IST
ಅಕ್ಷರ ಗಾತ್ರ

ಮಂಗಳೂರು: ಪುತ್ತೂರಿನ ಪ್ರಾಧ್ಯಾಪಕಿ ಪೂರ್ಣಿಮಾ ರವಿ ನಿರ್ದೇಶಿಸಿರುವ ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರಕ್ಕೆ 14ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ –2024ರಲ್ಲಿ ವಿಶೇಷ ಪ್ರಮಾಣಪತ್ರ (special festival mention certificate) ಲಭಿಸಿದೆ.

ಮಂಗಳವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕಿ ಪೂರ್ಣಿಮಾ ರವಿ ಹಾಗೂ
ಸಾಕ್ಷ್ಯಚಿತ್ರದ ಕಾರ್ಯಕಾರಿ ನಿರ್ಮಾಪಕ ರವಿ ನಾರಾಯಣ ಪ್ರಮಾಣಪತ್ರ ಸ್ವೀಕರಿಸಿದರು. ವಿಶ್ವದ ವಿವಿಧ ದೇಶಗಳ ಸುಮಾರು 700 ಚಲನಚಿತ್ರಗಳು ನಾಮಕರಣಗೊಂಡಿದ್ದವು.

‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಚಿತ್ರದಲ್ಲಿ ಕರ್ನಾಟಕದ 40ಕ್ಕೂ ಹೆಚ್ಚು ದೇವದಾಸಿಯರ ಜೀವನದ ವ್ಯಥೆ, ಕನಸುಗಳು, ಸಮಾಜದಲ್ಲಿ ಆಗಬೇಕಾಗಿರುವ ಪರಿವರ್ತನೆಗಳ ಬಗ್ಗೆ ಚರ್ಚಿಸಲಾಗಿದೆ.

ಅರ್ಮೇನಿಯಾದ ಚಿತ್ರ ನಿರ್ದೇಶಕ ರೋಮನ್ ಮುಶೆಗ್ಯಾನ್, ಜಪಾನ್‌ನ ನವೋಕಿ ಮತ್ಸುಮುರಾ,
ಸ್ಪೇನ್‌ನ ಫ್ರಾನ್ಸಿಸ್ಕೊ ಸ್ಯಾಂಚೆಜ್ ಪಲಾಝೋನ್, ವೆನೆಜುವೆಲಾದ ಆಲ್ಫ್ರೆಡೊ ಕಾಲ್ಡೆರಾ, ಚೀನಾದ ರಾನ್ ಲಿ, ಅಮೆರಿಕದ ಜೇಕ್ ಬೈರ್ಡ್, ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಜಿ.ಎಲ್.ಭಾರದ್ವಾಜ್,  ತೀರ್ಪುಗಾರರ ತಂಡದಲ್ಲಿದ್ದರು. ಡಿ.ಸಿ.ಸಿಂಗ್ ತಂಡದ ಸಮನ್ವಯಕಾರರಾಗಿದ್ದರು.

ಪೂರ್ಣಿಮಾ ರವಿ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದು, ಪುತ್ತೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT