ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ: ‌ಫೆ.3 ರಿಂದ 12ರವರೆಗೆ ಕಾಜೂರು ಮಖಾಂ ಶರೀಫ್ ಉರೂಸ್

Last Updated 31 ಜನವರಿ 2023, 5:26 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಕಾಜೂರು ಮಖಾಂ ಶರೀಫ್‌ನಲ್ಲಿ ಉರೂಸ್ ಸಂಭ್ರಮವು ಫೆ.3 ರಿಂದ ಫೆ.12 ರವರೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಯಲಿದೆ’ ಎಂದು ಉರೂಸ್ ಸಮಿತಿ ಅಧ್ಯಕ್ಷ ಕೆ‌.ಯು. ಇಬ್ರಾಹಿಂ ಕಾಜೂರು ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಜೂರು ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್, ಖಾಝಿ ಸಯ್ಯಿದ್ ಕೂರತ್ ತಂಙಳ್, ಸಯ್ಯಿದ್ ಕಾಜೂರು ತಂಙಳ್ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಫೆ.3 ರಂದು ಧ್ವಜಾರೋಹಣವನ್ನು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ನೆರವೇರಿಸಲಿದ್ದಾರೆ‌. ಖಾಝಿ ಸಯ್ಯಿದ್ ಕೂರತ್ ತಂಙಳ್ ಉಪಸ್ಥಿತಿಯಲ್ಲಿ ತಾಲ್ಲೂಕು ಸುನ್ನಿ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಉದ್ಘಾಟಿಸುವರು. ಇಸ್ಮಾಯಿಲ್ ತಂಙಳ್ ಸಹಿತ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ‌.

ರಾತ್ರಿ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ‘ಮದನಿಯಂ ಮಜ್ಲಿಸ್’, ಫೆ. 4 ರಂದು ರಾತ್ರಿ ಕಾಜೂರು ತಂಙಳ್ ಉದ್ಘಾಟನೆಯ ಬಳಿಕ ಕಿಲ್ಲೂರು ಖತೀಬ್ ಬಿ.ಎಂ ಉಮರ್ ಅಶ್ರಫಿ ಮತಪ್ರವಚನ ನಡೆಸುವರು. ಫೆ.5 ರಂದು ಇಸ್ಲಾಮಿಕ್ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಅರಬಾನ, ನಹತ್, ಕವಾಲಿ, ರಿಫಾಯಿ ನಶೀದ, ದಫ್ಫ್ ಒಳಗೊಂಡ ಕೇರಳ ಸರ್ಕಾರದ ‘ಫ್ಲಾಕ್‌ಲೋರ್ ಅಕಾಡೆಮಿ’ ಉಪಾಧ್ಯಕ್ಷ ಡಾ.ಉಸ್ತಾದ್ ಕೋಯಕಾಪಾಡ್ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ ‘ಇಶಲ್ ಪೋರಿಸ’ ನಡೆಯಲಿದೆ.

ಫೆ.6ರಂದು ದಾರುಸ್ಸಲಾಂ ಬೆಳ್ತಂಗಡಿ ಚೇರ್ಮನ್ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಉಪಸ್ಥಿತಿಯಲ್ಲಿ ಹನೀಫ್ ನಿಝಾಮಿ ಕಾಸರಗೋಡು, ಫೆ.7ರಂದು ರಫೀಕ್ ಸ‌ಅದಿ ದೇಲಂಪಾಡಿ ಉಪನ್ಯಾಸ ನಡೆಸಿಕೊಡಲಿದ್ದಾರೆ‌. ಫೆ.8 ರಂದು ಕಾಜೂರು ಮಹಿಳಾ ಶರೀಅತ್ ಕಾಲೇಜಿನ ಪ್ರಥಮ‌ ಧಾರ್ಮಿಕ ಪದವಿ ಪ್ರದಾನ ಕಾರ್ಯಕ್ರಮ ನಡೆದು, ಖಾಝಿ ಮಾಣಿ ಉಸ್ತಾದ್, ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಉಪಸ್ಥಿತಿಯಲ್ಲಿ ನೌಫಲ್ ಸಖಾಫಿ ಕಳಸ ಪ್ರವಚನ‌ ನೀಡುವರು.

ಫೆ.9ರಂದು ಬೃಹತ್ ದಿಕ್ರ್ ಮಜ್ಲಿಸ್ ಆಧ್ಯಾತ್ಮಿಕ ಸಂಗಮ‌ ನಡೆಯಲಿದ್ದು, ಕಡಲುಂಡಿ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್, ವಾದಿ ಇರ್ಫಾನ್ ತಂಙಳ್, ಗಂಜಿಮಠ ಅಸ್ಕರ್ ಬಿನ್ ಜಾನ್ ತಂಙಳ್, ಬೆಳಾಲು ತಂಙಳ್, ಎಸ್‌.ಎಂ ತಂಙಳ್, ಗುಲ್‌ರೇಝ್ ಅಹಮ್ಮದ್ ರಝ್ವಿ ಬೆಳ್ತಂಗಡಿ ಸಹಿತ ವಿದ್ವಾಂಸರು ಭಾಗವಹಿಸುವರು.

ಫೆ.10ರಂದು ಮುತ‌ಅಲ್ಲಿಂ ಮತ್ತು ಉಲಮಾ ಸಮಾವೇಶ ನಡೆಯಲಿದ್ದು, ಕೆ.ಸಿ. ರೋಡ್ ಉಸ್ತಾದ್ ಮುಖ್ಯ ಪ್ರಭಾಷಣ‌‌ ನಡೆಸಲಿದ್ದಾರೆ. ಫೆ.11ರಂದು ಪುಲ್ಲಾರ ಲುಕ್ಮಾನುಲ್ ಹಕೀಂ ಸಖಾಫಿ ಉಪನ್ಯಾಸ ನಡೆಯಲಿದೆ. ಫೆ.12ರಂದು ಬೆಳಿಗ್ಗೆ ಸಯ್ಯಿದ್ ಕುಂಬೋಳ್ ತಂಙಳ್ ಅಧ್ಯಕ್ಷತೆಯಲ್ಲಿ ಕಾಜೂರು ಮೌಲೀದ್, ಸಂದಲ್ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ, ಇತ್ಯಾದಿ ನಡೆದು, ಸಂಜೆ ಸರ್ವಧರ್ಮೀಯರ ಸೌಹಾರ್ದ ಸಂಗಮ‌ ನಡೆಯಲಿದೆ.

ಕಾರ್ಯಕ್ರಮವನ್ನು ಯೆನಪೋಯ ವಿವಿ ಕುಲಪತಿ ವೈ.ಅಬ್ದುಲ್ಲಕುಂಞಿ ಉದ್ಘಾಟಿಸಲಿದ್ದು, ವಕ್ಫ್ ಮಂಡಳಿ ರಾಜ್ಯಾಧ್ಯಕ್ಷ ಮೌಲಾನಾ ಎನ್‌ಕೆ‌ಎಮ್ ಶಾಫಿ ಸ‌ಅದಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಶಾಸಕರಾದ ಹರೀಶ್ ಪೂಂಜ, ಯು.ಟಿ ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್‌ ಸದಸ್ಯರಾದ ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್, ಬಿ.ಎಂ. ಫಾರೂಕ್, ಮಾಜಿ ಶಾಸಕರಾದ ವಸಂತ ಬಂಗೇರ, ಮೊಯಿದ್ದೀನ್ ಬಾವಾ, ಮಾಜಿ ಸಚಿವ ಕೆ.ಗಂಗಾಧರ ಗೌಡ, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಅಬ್ದುಲ್ ಅಝೀಝ್ ದಾರಿಮಿ, ಝಮೀರ್ ಅಹಮ್ಮದ್ ಖಾನ್, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್,‌ ಸೇವಿಯರ್ ಪಾಲೇಲಿ, ಡಾ.ಮುರಳಿಕೃಷ್ಣ ಇರ್ವತ್ರಾಯ, ಮಂಮ್ತಾಝ್ ಅಲಿ, ಇನಾಯತ್ ಅಲಿ, ಬಿ.ಎಂ. ಹಮೀದ್ ಹಾಜಿ ಉಜಿರೆ, ಜಯಂತ ಕೋಟ್ಯಾನ್, ಅಬೂಬಕ್ಕರ್ ಸಿದ್ದೀಕ್ ಮೋಟುಗೋಳಿ, ಫಕೀರಬ್ಬ ಮರೋಡಿ ಭಾಗವಹಿಸಲಿದ್ದಾರೆ.

ಅಂದೇ ರಾತ್ರಿ ಧಾರ್ಮಿಕ ಪಂಡಿತ, ಕೇರಳ ರಾಜ್ಯದ ಸಯ್ಯಿದ್ ಕಡಲುಂಡಿ ತಂಙಳ್ ನೇತೃತ್ವದಲ್ಲಿ ಉರೂಸ್ ಸಮಾರೋಪ ನಡೆಯಲಿದ್ದು, ಸಯ್ಯಿದ್ ಕಾಜೂರು ತಂಙಳ್, ಡಾ‌.ಕಾವಳಕಟ್ಟೆ ಹಝ್ರತ್,‌ ಮರ್‌ಹೂಮ್ ಕಾಜೂರು ತಂಙಳ್ ಸಹೋದರ ಸೈದಲವಿ ಕೋಯ ಜಮಲುಲ್ಲೈಲಿ ತಂಙಳ್ ಸೇರಿದಂತೆ ಅವರ ಕುಟುಂಬದ ಸದಸ್ಯರು, ಎಸ್‌ವೈಎಸ್ ರಾಜ್ಯ ಘಟಕದ ಅಧ್ಯಕ್ಷ ಡಾ.ಝೈನಿ ಕಾಮಿಲ್ ಸಖಾಫಿ, ಕಣಚೂರು ಮೋನು ಹಾಜಿ ಸಹಿತ ಪ್ರಮುಖರು ಭಾಗವಹಿಸಲಿದ್ದಾರೆ. ಡಾ. ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಕೇರಳ ಮತಪ್ರವಚನ ನಡೆಸಲಿದ್ದಾರೆ.

ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಎಚ್. ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಂ. ಮುಹಮ್ಮದ್ ಕಮಾಲ್ ಕಾಜೂರು, ಕಿಲ್ಲೂರು ಮಸ್ಜಿದ್‌ನ ವಕ್ಫ್ ನಿಯೋಜಿತ ಆಡಳಿತಾಧಿಕಾರಿ ಮುಹಮ್ಮದ್ ರಫಿ, ಮಾಜಿ ಅಧ್ಯಕ್ಷ ಎಂ.ಎ. ಕಾಸಿಂ ಮಲ್ಲಿಗೆಮನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT