ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಳಿಯ ಕಣ್ಣಿನ ಭಾಗಕ್ಕೆ ಚುಚ್ಚಿದ್ದ ಕೊಂಬಿಗೆ ಕತ್ತರಿ

Last Updated 9 ಜನವರಿ 2023, 16:02 IST
ಅಕ್ಷರ ಗಾತ್ರ

ಸುರತ್ಕಲ್: ಪಣಂಬೂರು, ಬೈಕಂಪಾಡಿ ಪ್ರದೇಶದಲ್ಲಿ ಓಡಾಡಿಕೊಂಡಿರುವ ಗೂಳಿಯೊಂದರ ಕಣ್ಣಿನ ಭಾಗಕ್ಕೆ ಉದ್ದವಾಗಿ ಬೆಳೆದ ಅದರದ್ದೇ ಕೊಂಬು ತೀವ್ರ ಸಮಸ್ಯೆಯಾಗಿ ಕಾಡಿತ್ತು. ಸುರತ್ಕಲ್‌ ಪ್ರಖಂಡರ ಬಜರಂಗದಳದ ಕಾರ್ಯಕರ್ತರು ಗೂಳಿಯ ಕೊಂಬನ್ನು ಕತ್ತರಿಸುವ ಮೂಲಕ ಮಾನವೀಯತೆ ಮೆರೆದರು.

ಗೂಳಿಯ ಕಣ್ಣಿನ ಭಾಗಕ್ಕೆ ಕೊಂಬು ಚುಚ್ಚುಕೊಂಡಿರುವುದು ಸ್ಥಳೀಯರಿಗೆ ಹಲವು ದಿನಗಳ ಮೊದಲೇ ಗೊತ್ತಾಗಿತ್ತು. ಅದಕ್ಕಾಗಿ ವೈದ್ಯಾಧಿಕಾರಿಗಳು, ಅರಣ್ಯ ಇಲಾಖೆಯವರು ಹಾಗೂ ಸ್ಥಳೀಯರ ನೆರವಿನಿಂದ ಗೂಳಿಯನ್ನು ಹಿಡಿಯಲು ಈ ಹಿಂದೆ ಪ್ರಯತ್ನಿಸಿದರೂ ಕಾರ್ಯಾಚರಣೆ ವಿಫಲಗೊಂಡಿತ್ತು.

ಸೋಮವಾರ ಮತ್ತೆ ಸುರತ್ಕಲ್ ಪ್ರಖಂಡದ ಬಜರಂಗದಳದ ಕಾರ್ಯಕರ್ತರು ಬೆಳಿಗ್ಗೆ 5ಗ೦ಟೆಯಿಂದ ಕಾರ್ಯಾಚರಣೆಗೆ ಇಳಿದಿದ್ದು, ಮಧ್ಯಾಹ್ನ ಸುಮಾರು ಮಧ್ಯಾಹ್ನ 2.30 ಗ೦ಟೆಯ ವರೆಗೂ ಶ್ರಮಪಟ್ಟು ಯಾವುದೇ ರೀತಿಯ ಅರಿವಳಿಕೆ ಚುಚ್ಚುಮದ್ದು ನೀಡದೇಹಗ್ಗದ ಸಹಾಯದಿಂದ ಹಿಡಿಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ.

ಬಳಿಕ ಪಶುವೈದ್ಯಾಧಿಕಾರಿಗಳ ನೆರವಿನಿಂದ ಗೂಳಿಯ ಕಣ್ಣಿನ ಭಾಗಕ್ಕೆ ಅಡ್ಡಿಯಾದ ಕೊಂಬನ್ನು ಕತ್ತರಿಸಿ ತೆಗೆದು, ಗೂಳಿಯ ಕಣ್ಣನ್ನು ರಕ್ಷಿಸಲಾಯಿತು. ಆಯಾಸಗೊಂಡಿದ್ದ ಗೂಳಿಗೆ ಬಳಿಕ ನೀರು, ಮೇವನ್ನು ನೀಡಿ ಉಪಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT