ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ಬಬ್ಬುಸ್ವಾಮಿ ದೈವಸ್ಥಾನ: ನೂತನ ಧ್ವಜಸ್ತಂಭದ ಪ್ರತಿಷ್ಠಾಪನೆ 

Last Updated 31 ಜನವರಿ 2023, 5:28 IST
ಅಕ್ಷರ ಗಾತ್ರ

ಬಜಪೆ: ಇಲ್ಲಿನ ಸಿದ್ಧಾರ್ಥ ನಗರದಲ್ಲಿನ ಕೋಟೆ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ತಾಮ್ರದ ಹೊದಿಕೆ ಅಳವಡಿಸಿದ ನೂತನ ಧ್ವಜಸ್ತಂಭವನ್ನು ಭಾನುವಾರ ಭೋಜ ಪಾತ್ರಿ ಮುಕ್ಕ ಅವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು.

ಉದ್ಯಮಿ ಉದಯ ಕುಮಾರ್ ಧ್ವಜಸ್ತಂಭದ ಮರವನ್ನು ಸೇವಾರೂಪದಲ್ಲಿ ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ. ಕೋಟೆದ ಬಬ್ಬುಸ್ವಾಮಿ (ಕೋರ್ದಬ್ಬು) ದೈವಸ್ಥಾನದ ಇತಿಹಾಸದಲ್ಲೇ ಧ್ವಜಸ್ತಂಭ (ಕೊಡಿಮರ) ಇರುವ ಏಕೈಕ ದೈವಸ್ಥಾನ ಇದಾಗಿದೆ.

ದೈವಸ್ಥಾನದ ಅಧ್ಯಕ್ಷ ಜಯಾನಂದ ಕೋಟ್ಯಾನ್, ಉಪಾಧ್ಯಕ್ಷ ಬಾಬು ಬೆಳ್ಚಡ, ಅರ್ಚಕ ಪ್ರಕಾಶ್ ಸಾಲ್ಯಾನ್, ಖಜಾಂಚಿ ವೆಂಕಪ್ಪ, ಬಾರ್ಕೂರು ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಬಬ್ಬುಸ್ವಾಮಿ ಮೂಲಕ್ಷೇತ್ರದ ಅಧ್ಯಕ್ಷ ಶಿವಪ್ಪ ನಂತೂರು, ಉದ್ಯಮಿ ಉದಯ ಕುಮಾರ್ ಸಜಿಪ, ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ಸೀತಾರಾಮ ಕೋಡಿಕಲ್, ಸಮಿತಿಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಮಿತಿಯ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT