ಶನಿವಾರ, ಜುಲೈ 24, 2021
25 °C

ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ದಾಖಲೆ ಮಟ್ಟದ ಹಾಲಿನ ಸಂಗ್ರಹಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮಂಗಳೂರು: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದಲ್ಲಿ ಮಂಗಳವಾರ 5 ಲಕ್ಷ ಕೆ.ಜಿ.ಗೂ ಅಧಿಕ ಹಾಲು ಸಂಗ್ರಹಣೆಯಾಗಿದ್ದು, ಇದು ಒಕ್ಕೂಟದಲ್ಲಿ ಅತ್ಯಧಿಕ ಹಾಲಿನ ಸಂಗ್ರಹಣೆಯಲ್ಲಿ ದಾಖಲೆಯಾಗಿದೆ. 

ಉಭಯ ಜಿಲ್ಲೆಯಲ್ಲಿ ಲಾಕ್‌ಡೌನ್ ಇರುವುದರಿಂದ ಹೋಟೆಲ್, ಕ್ಯಾಂಟೀನ್, ವಿದ್ಯಾ ಸಂಸ್ಥೆಗಳು ಬಂದ್ ಆಗಿದ್ದು, ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಹಾಲಿನ ಮಾರಾಟ ನಿತ್ಯ ಸುಮಾರು ಶೇ 25 ರಷ್ಟು ಕಡಿಮೆಯಾಗಿದೆ.  

ಒಕ್ಕೂಟದ ಬೇಡಿಕೆಯನ್ನು ಪೂರೈಸಿ, ಉಳಿಕೆಯಾಗಿರುವ ಹೆಚ್ಚುವರಿ ಹಾಲನ್ನು ಪರಿವರ್ತನೆಗಾಗಿ ಪರಿವರ್ತನಾ ಘಟಕಕ್ಕೆ ಕಳುಹಿಸಲಾಗುತ್ತಿದ್ದು, ಒಕ್ಕೂಟದ ಆರ್ಥಿಕ ಪರಿಸ್ಥಿತಿಯ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ.

ರಾಜ್ಯದಾದ್ಯಂತ ನಿತ್ಯ 85 ಲಕ್ಷ ಲೀಟರ್ ಹಾಲಿನ ಸಂಗ್ರಹಣೆಯಾಗುತ್ತಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಲಿನ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ. ಹೊರ ರಾಜ್ಯಗಳಲ್ಲಿ ಹಾಲಿನ ಪುಡಿಗೆ ಬೇಡಿಕೆಯೂ ಕಡಿಮೆಯಾಗಿದೆ.

ಸರ್ವಕಾಲಿಕ ಹಾಲಿನ ಸಂಗ್ರಹಣೆಯ ಗುರಿಯನ್ನು ತಲುಪಿರುವುದಕ್ಕೆ ಒಕ್ಕೂಟದ ‌ಸದಸ್ಯರನ್ನು  ಅಭಿನಂದಿಸುವುದಾಗಿ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು