ಗುರುವಾರ , ಮಾರ್ಚ್ 23, 2023
23 °C

ನಂದಾವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಟ್ವಾಳ: ಇಲ್ಲಿನ ನಂದಾವರ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಹೊರೆಕಾಣಿಕೆ ಮೆರವಣಿಗೆಗೆ ಮಾರ್ನಬೈಲಿನ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಭಾನುವಾರ ಚಾಲನೆ ನೀಡಿದರು.

ಮಾರ್ನಬೈಲು ಮುಖ್ಯರಸ್ತೆಯಿಂದ ಹೊರಟ ಮೆರವಣಿಗೆಗೆ ಗೊಂಬೆ ಕುಣಿತ, ಚೆಂಡೆ ವಾದನ, ಕೊಂಬು ವಾದ್ಯ ವಾದನ, ತಾಲೀಮು ತಂಡ, ಭಜನಾ ತಂಡ, ಪೂರ್ಣ ಕುಂಭ ಕಲಶ ಸಹಿತ ಮಹಿಳೆಯರ ತಂಡ, ಸುಡುಮದ್ದು ಪ್ರದರ್ಶನ ವಿಶೇಷ ಮೆರುಗು ನೀಡಿತು.

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ರಾಜೇಶ್ ನಾಯ್ಕ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಜಿ.ಶೆಟ್ಟಿ ದಳಂದಿಲ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ ರಾವ್ ನೂಯಿ, ಕಾರ್ಯಾಧ್ಯಕ್ಷ ಕೆ.‌ ವಿಶ್ವನಾಥ ಆಳ್ವ ಕಾಂತಾಡಿಗುತ್ತು, ಕಾರ್ಯನಿರ್ವಾಹಣಾಧಿಕಾರಿ ಜಯಮ್ಮ ಪಿ., ಪ್ರಧಾನ ಅರ್ಚಕ ಮಹೇಶ್ ಭಟ್, ಹಸಿರುವಾಣಿ ಹೊರೆಕಾಣಿಕೆ ಸಮಿತಿ ಸಂಚಾಲಕ ಯಶವಂತ ಪೂಜಾರಿ ದೇರಾಜೆಗುತ್ತು, ಭಾಸ್ಕರ ಕಂಪದಕೋಡಿ, ಸಮಿತಿ ಪ್ರಮುಖರಾದ ಎಂ. ಸುಬ್ರಹ್ಮಣ್ಯ ಭಟ್, ಎಂ. ಸೂರ್ಯನಾರಾಯಣ ಭಟ್, ದೇವು ಶೆಟ್ಟಿ, ರವೀಂದ್ರ ಕಂಬಳಿ, ಜಯಶಂಕರ ಬಾಸ್ರಿತ್ತಾಯ, ದಾಮೋದರ ಬಿ.ಎಂ., ರಾಮ ಪ್ರಸಾದ್ ಪೂಂಜ, ಅರುಣ್ ಕುಮಾರ್, ಎಂ. ಉಮೇಶ್, ಸಂದೀಪ್ ಕುಮಾರ್, ರೂಪೇಶ್ ಆಚಾರ್ಯ, ಸತೀಶ್ ಗೌಡ, ಲೋಹಿತ್ ಪಣೋಲಿಬೈಲು, ಸಚಿನ್ ಮೆಲ್ಕಾರ್, ನವೀನ್ ಸುವರ್ಣ, ಕವಿತಾ ವಸಂತ್, ಜಯಶ್ರೀ ಅಶೋಕ್, ದೇವಪ್ಪ ನಾಯ್ಕ ದಾಸರಗುಡ್ಡೆ, ಮೋಹನದಾಸ ಹೆಗ್ಡೆ, ಗಣೇಶ್ ಕಾರಾಜೆ, ಮಹಾಬಲ ಕೊಟ್ಟಾರಿ, ಸುಧಾಕರ ಆಚಾರ್ಯ, ಶ್ರೀಕಾಂತ್ ಶೆಟ್ಟಿ, ಶ್ರೀನಿವಾಸ ಭಟ್, ರತ್ನಾಕರ ಪೂಜಾರಿ, ಅಶೋಕ್ ಗಟ್ಟಿ ಕಟ್ಲೆಮಾರ್, ಗಿರೀಶ್ ಕುಮಾರ್ ಕುಕ್ಕುದಕಟ್ಟೆ, ಸುರೇಶ್ ಬಂಗೇರ, ಕಿಶನ್ ಶೇಣನ, ಎನ್. ಶಿವ ಶಂಕರ್, ಎನ್.ಕೆ.‌ಶಿವ, ಜಗದೀಶ ಐತಾಳ್, ಪ್ರವೀಣ್ ಶೆಟ್ಟಿ, ನಾಗೇಶ್ ಕುಲಾಲ್ , ಮನೋಜ್ ಕಟ್ಟೆಮಾರ್, ದೇವಿಪ್ರಸಾದ್ ಪೂಂಜ, ಬಿ.ಕೆ. ರಾಜ್, ದಿನೇಶ್ ಅಮ್ಟೂರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು