ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಾಡಿಗಳಿಗೆ ಸಾವಿನ ಕುಣಿಕೆ

ಸಿ. ಶಿವನಾಂದ
Published 13 ನವೆಂಬರ್ 2023, 5:40 IST
Last Updated 13 ನವೆಂಬರ್ 2023, 5:40 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬಾಚಿಗೊಂಡನಹಳ್ಳಿ, ಅಂಕಸಮುದ್ರ, ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಹಾದು ಹೋಗಿರುವ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ವಿದ್ಯುತ್ ತಂತಿಗಳ ಸ್ಪರ್ಶವಾಗಿ ಬಾನಾಡಿಗಳು ಜೀವ ಬಿಡುತ್ತಿವೆ.

ಕಳೆದ ಎರಡು ದಿನಗಳಲ್ಲಿ 20ಕ್ಕೂ ಹೆಚ್ಚು ಪಕ್ಷಿಗಳು ಸತ್ತಿವೆ. ಪ್ರತಿ ವರ್ಷ ಹಕ್ಕಿಗಳ ವಲಸೆ ಸಂದರ್ಭದಲ್ಲಿ ಈ ಅವಘಡ ಸಂಭವಿಸುತ್ತಲೇ ಇರುತ್ತದೆ.

ತಾಲ್ಲೂಕಿನ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶ. ಕೆರೆಗಳು, ತುಂಗಭದ್ರಾ ಹಿನ್ನೀರು ಪ್ರದೇಶಗಳಿಗೆ ಪಕ್ಷಿಗಳ ವಲಸೆ ಆರಂಭ ಆಗಿರುವ ಬೆನ್ನಲ್ಲೇ ಹಕ್ಕಿಗಳ ಸಾವು ಪಕ್ಷಿಪ್ರಿಯರ ಮನಕಲಕಿದೆ. ಎತ್ತರದ ವಿದ್ಯುತ್ ಟವ ರ್‌ಗಳ ತಂತಿಗಳು ಪಕ್ಷಿಗಳಿಗೆ ಸಾವಿನ ಕುಣಿಕೆ ಒಡ್ಡಿದಂತಿದೆ. ಈ ಹೈಟೆ ನ್ಷನ್ ವಿದ್ಯುತ್ ಕಂಬಗಳು ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಿಂದ ಮೂರು ಕಿ.ಮೀ. ಅಂತರದಲ್ಲೇ ಹಾದು ಹೋಗಿವೆ.

ಹಕ್ಕಿಗಳು ಹಾದು ಹೋಗುವ ಮಾರ್ಗಗಳನ್ನು ಗುರುತಿಸಿ ಹೈಟೆನ್ಷನ್ ವಿದ್ಯುತ್ ತಂತಿಗಳಿಗೆ ಬೆಳಕಿನ ಫಲಕ (ರಿಫ್ಲೆಕ್ಟರ್) ಅಳವಡಿಸಿದರೆ ಮಾತ್ರ ಬಾನಾಡಿಗಳನ್ನು ಪಾರು ಮಾಡ ಬಹು ದು. ಅರಣ್ಯ ಇಲಾಖೆ ತಜ್ಞರ ತಂಡ ವನ್ನು ಬಳಸಿಕೊಳ್ಳಬೇಕು ಎಂದು ಪಕ್ಷಿ ಪ್ರೇಮಿ ವಿಜಯಕುಮಾರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT