ಶುಕ್ರವಾರ, ಅಕ್ಟೋಬರ್ 7, 2022
28 °C

ನಾಟ್ಯಶಾಸ್ತ್ರ ದೇವತಾ ಮೂಲದ ಕಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರತ್ಕಲ್: ನಾಟ್ಯಶಾಸ್ತ್ರ ದೇವತಾ ಮೂಲದ ಕಲೆಯಾಗಿದ್ದು ಈ ಕಾರಣದಿಂದ ಗೌರವದಿಂದ ಕಾಣಲಾಗುತ್ತಿದೆ ಎಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಪತಿ ಉಪಾಧ್ಯಾಯ ನುಡಿದರು.

ಅವರು ಇತ್ತೀಚೆಗೆ ನಗರದ ಡಾನ್ ಬಾಸ್ಕೋ ಹಾಲ್‌ನಲ್ಲಿ ಕೊಟ್ಟಾರದ ಭರತಾಂಜಲಿ ಸಂಸ್ಥೆ ಆಯೋಜಿಸಿದ್ದ ಕಿನ್ನಿಗೋಳಿ ಶಿವಪ್ರಣಾಮ್ ಸಂಸ್ಥೆಯ ನೃತ್ಯ ಶಿಕ್ಷಕಿ ವಿದುಷಿ ಅನ್ನಪೂರ್ಣ ರಿತೇಶ್ ಅವರ ನೃತ್ಯ ಸಂಧ್ಯಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ನೃತ್ಯ ಗುರು ವಿದುಷಿ ಶೀಲಾ ಚಂದ್ರಶೇಖರ್ ನೃತ್ಯಕಲಾವಿದರು ಅಭಿನಯ ಪಕ್ವತೆ, ಖಚಿತ ಆಂಗಿಕ ಚಲನೆ ಮತ್ತು ಹಸ್ತಮುದ್ರೆಗಳಿಗೆ ಮಹತ್ವ ನೀಡಿ ಶುದ್ಧ ಅಡವುಗಳನ್ನು ಪ್ರದರ್ಶಿಸಬೇಕು ಎಂದರು.

ನಾಟ್ಯಾಚಾರ್ಯ ಗುರು ಮೋಹನ್ ಕುಮಾರ್ ಶುಭ ಕೋರಿದರು. ಗುರು ಕಮಲಾ ಭಟ್ ಇದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ರಿತೇಶ್ ಅಂಚನ್ ಸ್ವಾಗತಿಸಿ ಮಂಜುಳಾ ಶೆಟ್ಟಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು