ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ ಬೆದರಿಕೆ: ಹಿಂದೂ ಜಾಗರಣ ವೇದಿಕೆ ಮುಖಂಡ ಸೇರಿ 7 ಜನರ ಬಂಧನ

Published 10 ನವೆಂಬರ್ 2023, 23:30 IST
Last Updated 10 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಪುತ್ತೂರು (ದಕ್ಷಿಣ ಕನ್ನಡ): ನಗರ ಹೊರವಲಯದ ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಚೇರಿ ಬಳಿ ತಲವಾರಿನೊಂದಿಗೆ ಬಂದು ಕೊಲೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಘಟಕದ ಸಂಯೋಜಕ ದಿನೇಶ್ ಪಂಜಿಗ, ಇಬ್ಬರು ಬಾಲಕರು ಸೇರಿ 9 ಮಂದಿಯ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏಳು ಜನರನ್ನು ಬಂಧಿಸಲಾಗಿದೆ.

‘ಸಾಮಾಜಿಕ ಮಾಧ್ಯಮದ ಬಳಗವೊಂದರಲ್ಲಿ ಚರ್ಚೆಯಾದ ವಿಷಯಕ್ಕೆ ಸಂಬಂಧಿಸಿ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿರುವ ಬನ್ನೂರಿನ ಮನೀಶ್‌ ಕುಲಾಲ್‌ ಎಂಬವರನ್ನು ಗುರಿಯಾಗಿಸಿಕೊಂಡು ಶುಕ್ರವಾರ ಮಧ್ಯಾಹ್ನ ದಿನೇಶ್ ಪಂಜಿಗ ಅವರು ಎಂಟು ಮಂದಿ ಬೆಂಬಲಿಗರೊಂದಿಗೆ ತಲುವಾರು ಹಿಡಿದುಕೊಂಡು ಪುತ್ತಿಲ ಪರಿವಾರದ ಕಚೇರಿ ಬಳಿಗೆ ತೆರಳಿದ್ದಾರೆ. ‘ತಾಕತ್ತಿದ್ದರೆ ಇಲ್ಲಿಗೆ ಬಾ ಎಂದು ಹೇಳಿದ್ದ ಮನೀಶ್ ಎಲ್ಲಿದ್ದಾನೆ’ ಎಂದು ಪ್ರಶ್ನಿಸಿ ಅರಚಿದ್ದಾರೆ. ಈ ವೇಳೆ ಮನೀಶ್‌ ಕುಲಾಲ್‌, ಪುತ್ತಿಲ ಪರಿವಾರದ ಕಚೇರಿಯಲ್ಲಿ ಇರಲಿಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಮಾಹಿತಿ ತಿಳಿದ ಮನೀಶ್‌ ಕುಲಾಲ್‌ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಪುತ್ತೂರು ತಾಲ್ಲೂಕಿನ ಶಾಂತಿಗೋಡು ಗ್ರಾಮದ ನಿವಾಸಿ ದಿನೇಶ್ ಪಂಜಿಗ (38), ನರಿಮೊಗ್ರು ಗ್ರಾಮದ ಭವಿತ್ (19), ಬೊಳುವಾರಿನ ಮನ್ವಿತ್ (19), ಆರ್ಯಾಪು ಗ್ರಾಮದ ಜಯಪ್ರಕಾಶ್ (18), ಚಿಕ್ಕಮುಡ್ನೂರು ಗ್ರಾಮದ ಚರಣ್ (23), ಬನ್ನೂರು ಗ್ರಾಮದ ಮನೀಶ್ (23), ಪುತ್ತೂರು ಕಸಬಾದ ವಿನೀತ್ (19) ಅವರನ್ನು ಬಂಧಿಸಿದ್ದಾರೆ. 

ಈ ಘಟನೆಯಿಂದಾಗಿ ಮುಕ್ರಂಪಾಡಿಯ ಪುತ್ತಿಲ ಪರಿವಾರದ ಕಚೇರಿ ಬಳಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆ ಬಳಿಕದ ವಿದ್ಯಮಾನದಲ್ಲಿ ಪುತ್ತೂರು ನಗರ ಠಾಣೆಯ ಎದುರು ಎರಡೂ ತಂಡದ ಬೆಂಬಲಿಗರು ಸೇರಿ ಅಲ್ಲಿಯೂ ಗೊಂದಲದ ವಾತಾವರಣ ಉಂಟಾಗಿತ್ತು.

ಈ ಪ್ರಕರಣದ ವಿಚಾರದಲ್ಲಿ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದಂತೆ ಮತ್ತು ವದಂತಿ ಹರಡದಂತೆ ಪೊಲೀಸರು ಮನವಿ ಮಾಡಿದ್ದಾರೆ.

ಪುತ್ತೂರಿನಲ್ಲಿ ಮತ್ತೆ ರೌಡಿಸಂ ಅಟ್ಟಹಾಸ ಎಲ್ಲೆ ಮೀರುತ್ತಿದೆ. ಅಮಾಯಕ ಕಾರ್ಯಕರ್ತರನ್ನು ಹತ್ಯೆ ಮಾಡುವ ಮನಸ್ಥಿತಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು
- ಅರುಣಕುಮಾರ್‌ ಪುತ್ತಿಲ ಪುತ್ತಿಲ ಪರಿವಾರದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT