ಮಂಗಳೂರು: ದೀಪಾವಳಿ ಕುಟುಂಬ ಮಿಲನ

ಮಂಗಳೂರು: ಸಂಸ್ಕಾರ ಭಾರತಿ ಮಂಗಳೂರು ಘಟಕದ ವತಿಯಿಂದ ದೀಪಾವಳಿ ಕುಟುಂಬ ಮಿಲನ ನಗರದ ತುಳು ಭವನದಲ್ಲಿ ಭಾನುವಾರ ನಡೆಯಿತು.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸನಾತನ ಹಿಂದೂ ಧರ್ಮ, ಸಂಸ್ಕೃತಿ, ಭಜನೆ ಇತ್ಯಾದಿ ಉಳಿಸಬೇಕು ಎಂದರು.
ಗಾಯಕ ಸಂದೇಶ್ ನೀರ್ ಮಾರ್ಗ ಮುಖ್ಯ ಅತಿಥಿಯಾದ್ದರು. ಮಹಾನಗರ ಗೋಸೇವಾ ಸಂಯೋಜಕ ರವಿ ಅಲೆವೂರಾಯ ವರ್ಕಾಡಿ ಮಾತನಾಡಿ, ಮನೆಗಳಲ್ಲಿ ಭಜನೆ ನಿರಂತರವಾಗಿ ನಡೆಯಬೇಕು, ಭಜನೆಯಿಂದ ಏಕಾಗ್ರತೆ ಒಗ್ಗಟ್ಟು ಮೂಡುತ್ತದೆ ಎಂದರು.
ದೀಪಾವಳಿ ಭಜನೆಯ ಸೊಬಗು, ತುಳುನಾಡ ಬಲೀಂದ್ರ ಲೆಪ್ಪುದ ಪೊರ್ಲು ಕಾರ್ಯಕ್ರಮವನ್ನು ಬಾಲಕೃಷ್ಣ ಕತ್ತಲ್ ಸಾರ್ ನಡೆಸಿಕೊಟ್ಟರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಕಾರ ಭಾರತಿಯ ಸದಸ್ಯ ತಾರಾನಾಥ್ ಶೆಟ್ಟಿ ಬೋಳಾರ, ಡಾ. ಅರುಣ್ ಉಳ್ಳಾಲ್, ಕೂಸಪ್ಪ ಶೆಟ್ಟಿಗಾರ್, ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ವೀರ ವಿನಾಯಕ ಜನ ಸೇವಾ ಟ್ರಸ್ಟ್ ಅಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು.
ಸಂಸ್ಕಾರ ಭಾರತಿ ಮಂಗಳೂರು ಘಟಕದ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರ್, ಉಪಾಧ್ಯಕ್ಷ ಚಂದ್ರಶೇಖರ ನಾವಡ, ಪ್ರಾಂತ ಸಹಕಾರ್ಯದರ್ಶಿ ನಾಗರಾಜ ಶೆಟ್ಟಿ, ಉಪಾಧ್ಯಕ್ಷ ಧನಪಾಲ್ ಶೆಟ್ಟಿಗಾರ್, ವಿಭಾಗ ಸಂಚಾಲಕ ಮಾಧವ ಭಂಡಾರಿ, ಪ್ರಾಂತ ಸಹ ಕೋಶಾಧಿಕಾರಿ ರಘುವೀರ್ ಗಟ್ಟಿ, ಸಂಘಟನಾ ಕಾರ್ಯದರ್ಶಿ ಗಣೇಶ್ ಕುಮಾರ್, ಕಿರಣ್, ಚೇತಕ್ ಪೂಜಾರಿ, ಮ.ಯೋಗೀಶ್ ಆಚಾರ್, ಸುಖಲತಾ, ಚಂದ್ರಪ್ರಭ, ಶ್ರೀಲತಾ ನಾಗರಾಜ್, ಸುಜೀರ್ ವಿನೋದ್, ವಿದ್ವತ್ ಶೆಟ್ಟಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.