ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

ಗುಡ್ಡದಲ್ಲಿದ್ದ ಬಾವಿ
Last Updated 10 ಜುಲೈ 2020, 8:21 IST
ಅಕ್ಷರ ಗಾತ್ರ

ಪುತ್ತೂರು:ತಾಲ್ಲೂಕಿನ ಮಾಡ್ನೂರು ಗ್ರಾಮದ ಮದ್ಲ ಸಮೀಪದ ಗುಡ್ಡದಲ್ಲಿರುವ ಬಾವಿಗೆ ಗುರುವಾರ ಜಿಂಕೆಯೊಂದು ಬಿದ್ದಿದ್ದು, ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.

ಕಾಡಿನಿಂದ ಬಂದಿದ್ದ ಜಿಂಕೆಯನ್ನು ನಾಯಿಯೊಂದು ಬೆನ್ನಟ್ಟಿತ್ತು. ಆಗ ಹೆದರಿ ಓಡಿದ ಜಿಂಕೆ ಗುಡ್ಡದ ಬಾವಿಗೆ ಬಿದ್ದು ನೀರಿನಲ್ಲಿ ಒದ್ದಾಡತೊಡಗಿತ್ತು. ಈ ಕುರಿತು ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದವರು ಸ್ಥಳೀಯರ ಸಹಕಾರದೊಂದಿಗೆ ಬಾವಿಯಲ್ಲಿದ್ದ ಜಿಂಕೆಯನ್ನು ಹಗ್ಗದ ಸಹಾಯದಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟರು.

ಅರಣ್ಯ ಇಲಾಖೆಯ ಉಪ ಅರಣ್ಯಾಧಿಕಾರಿ ಲೋಕೇಶ್, ಅರಣ್ಯ ರಕ್ಷಕರಾದ ಮೋಹನ್, ಉಮೇಶ್, ವೆಂಕಟೇಶ್, ದೀಪಕ್, ಅಗ್ನಿಶಾಮಕದ ದಳದ ಶಂಕರ್, ರುಕ್ಮಯ ಗೌಡ, ಕುಶಾಲಪ್ಪ, ತೌಸಿಫ್, ಚಾಲಕ ಮೋಹನ್ ಜಾದವ್, ಗೃಹರಕ್ಷಕದಳದ ನಿಖಿಲ್‌ರಾಜ್ ಆಕಾಶ್ ಮತ್ತಿತರರು ಜಿಂಕೆಯ ರಕ್ಷಣಾ ಕಾರ್ಯಾಚರಣೆ ನಡೆಸಿದಿದ್ದರು. ಸ್ಥಳೀಯರು ಸಾಥ್ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT