ಮೂಡುಬಿದಿರೆ: ವಿಕಸಿತ ಭಾರತ ನಿರ್ಮಾಣದ ಮಹಾಸಂಕಲ್ಪ ಸಾಕಾರಗೊಳಿಸಲು ಯುವಜನತೆ ಫಲಾನುಭವಿಗಳಾದರೆ ಸಾಲದು, ರಾಷ್ಟ್ರದ ಭವಿಷ್ಯ ರೂಪಿಸುವ ಶಿಲ್ಪಿಗಳಾಗಬೇಕು ಎಂದು ನವದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್ ಹೇಳಿದರು.

ಆಳ್ವಾಸ್ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ನ 2026-27ನೇ ಸಾಲಿನ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಂದೇ ಮಾತರಂ ಕೇವಲ ದೇಶಭಕ್ತಿಯ ಘೋಷಣೆಯಲ್ಲ, ಅದು ಭಾರತದ ಆತ್ಮಸ್ವರವಾಗಿ ಪ್ರತಿಧ್ವನಿಸಬೇಕು. ಪದವಿ ಮಾತ್ರ ಸಾಲದು. ಯುವಜನತೆ ನಿರಂತರ ಕೌಶಲಾಭಿವೃದ್ಧಿಗೆ ಒತ್ತು ನೀಡಬೇಕು. ಈ ಪೀಳಿಗೆ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಸುವವರಾಗಬೇಕು. ಉದ್ಯಮಶೀಲತೆ ಮತ್ತು ನವೀನತೆ ಆರ್ಥಿಕ ಬೆಳವಣಿಗೆಯ ಮುಖ್ಯ ಚಾಲಕ ಶಕ್ತಿಗಳು ಎಂದು ವಿವರಿಸಿದರು.

ಡಿಜಿಟಲ್ ಸಾಕ್ಷರತೆಯಿಂದ ಆರ್ಥಿಕ ಸಾಕ್ಷರತೆಯತ್ತ ಹೆಜ್ಜೆ ಇಡಬೇಕು. ಯುವಜನತೆ ಹಣಕಾಸು ಯೋಜನೆ ಹಾಗೂ ಉಳಿತಾಯದ ಮಹತ್ವ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃತಕ ಬುದ್ಧಿಮತ್ತೆ ಉದ್ಯೋಗ ಕಸಿದುಕೊಳ್ಳುವುದಿಲ್ಲ; ಬದಲಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. 1980ರ ದಶಕದ ಕಂಪ್ಯೂಟರ್ ಕ್ರಾಂತಿಯಂತೆ, ಕೃತಕ ಬುದ್ಧಿಮತ್ತೆಯ ಯುಗದಲ್ಲಿಯೂ ಕೌಶಲವರ್ಧನೆ ಅಗತ್ಯವಿದೆ. ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಸ್ವಾವಲಂಬನೆಗೆ ಸಂಬಂಧಿಸಿ ಕೇಂದ್ರ ಬಜೆಟ್ ಕ್ರಮಗಳನ್ನೂ ಅವರು ಉಲ್ಲೇಖಿಸಿದರು.

ಬಾನ್ಸುರಿ ಸ್ವರಾಜ್ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಅಧ್ಯಕ್ಷೆ ಡಾ.ದೀಪಾ ಕೊಠಾರಿ, ಆಳ್ವಾ ಫಾರ್ಮಸಿ ಆಡಳಿತಾಧಿಕಾರಿ ಡಾ.ಗ್ರೀಷ್ಮಾ ವಿವೇಕ್ ಆಳ್ವ, ಬಾನ್ಸುರಿ ಸ್ವರಾಜ್ ಸಂಬಂದಿ ನೀತು ಭಾಗವಹಿಸಿಸ್ದರು. ಕಲ್ಬ್ನ ಸದಸ್ಯೆ ನಿಯತಿ ಅಮೀನ್ ನಿರೂಪಿಸಿ, ಶ್ರೀಶ್ ಕೊಟೇಗಾರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.