ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿಜಿ ಲಾಕರ್ ಮೂಲಕ ಅಂಕಪಟ್ಟಿ ಪಡೆಯಬಹುದು ಎಂದು ವಿವಿ ಹೇಳುತ್ತದೆ. ಆದರೆ, ಈ ಅಂಕಪಟ್ಟಿಯಲ್ಲಿ ಕೆಲವರಿಗೆ ಅಂಕವೇ ನಮೂದಾಗಿಲ್ಲ, ಕೆಲವರ ಭಾವಚಿತ್ರ ಇಲ್ಲ, ವಿದ್ಯಾರ್ಥಿಗಳು ಸಲ್ಲಿಸುವ ಪ್ರಾಜೆಕ್ಟ್‌ಗಳ ಮಾಹಿತಿ ಇಲ್ಲ. ಪ್ರತಿ ಸೆಮಿಸ್ಟರ್‌ಗೆ ಅಂಕಪಟ್ಟಿ ಶುಲ್ಕ ₹230 ಪಡೆಯುವ ವಿವಿ ಅಂಕಪಟ್ಟಿ ನೀಡದಿದ್ದರೆ ಹೇಗೆ? ಈ ಬಗ್ಗೆ ಕುಲಪತಿ ಬಳಿ ಐದು ಬಾರಿ ಚರ್ಚಿಸಲಾಗಿದೆ. ಡಿಜಿ ಲಾಕರ್ ಮೂಲಕ ಅಂಕಪಟ್ಟಿ ನೀಡುವಂತೆ ಸರ್ಕಾರ ಆದೇಶ ನೀಡಿದ್ದು, ಸರ್ಕಾರದಿಂದ ಬದಲಾದ ಆದೇಶ ಬಂದಲ್ಲಿ ವಿವಿ ಅದನ್ನು ಪೂರೈಸಲಿದೆ ಎನ್ನುತ್ತಾರೆ’ ಎಂದರು.