ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು| ಆನ್‌ಲೈನ್ ವಂಚನೆ; ₹ 18.43 ಲಕ್ಷ ಕಳೆದುಕೊಂಡ ವ್ಯಕ್ತಿ

Last Updated 18 ಫೆಬ್ರುವರಿ 2023, 6:57 IST
ಅಕ್ಷರ ಗಾತ್ರ

ಮಂಗಳೂರು: ಡಿಜಿಟಲ್ ಮಾರ್ಕೆಟಿಂಗ್ ಮೂಲಕ ತ್ವರಿತ ಹಣ ಗಳಿಸುವ ಆಸೆಯ ಬಲೆಗೆ ಬಿದ್ದ ವ್ಯಕ್ತಿಯೊಬ್ಬರು ₹18.43 ಲಕ್ಷ ಹಣ ಕಳೆದುಕೊಂಡಿರುವ ಬಗ್ಗೆ ಇಲ್ಲಿನ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಿಸೆಂಬರ್ 14ರಂದು ಡಿಜಿಟಲ್‌ ಮಾರ್ಕೆಟಿಂಗ್‌ ಮೂಲಕ ಹಣಗಳಿಸುವ ಬಗ್ಗೆ ಅಪರಿಚಿತ ವ್ಯಕ್ತಿ ಕಳುಹಿಸಿದ್ದ ವಾಟ್ಸ್‌ಆ್ಯಪ್‌ ಸಂದೇಶವನ್ನು ನಂಬಿದ ಅವರು, ಆ ವ್ಯಕ್ತಿ ಹೇಳಿದ ಟೆಲಿಗ್ರಾಂ ಚಾನೆಲ್‌ಗೆ ಸದಸ್ಯರಾಗಿದ್ದರು.

ಆ ಚಾನೆಲ್‌ ಮೂಲಕ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ನಂತರ ಡಿ.18ರಂದು
ಪ್ರಥಮವಾಗಿ ₹ 9,000 ಮೊತ್ತವನ್ನು ತಮ್ಮ ಬ್ಯಾಂಕ್ ಖಾತೆಯಿಂದ ಪಾವತಿಸಿದ್ದಾರೆ. ಆ ಮೊತ್ತ ವಾಪಸ್‌ ಬಂದಿದೆ. ಇದರಿಂದ ವಿಶ್ವಾಸ ಹೊಂದಿದ ಅವರು, ಅಪರಿಚಿತ ವ್ಯಕ್ತಿ ಹೇಳಿದಂತೆ ಹಂತ ಹಂತವಾಗಿ ಹಣ ಕಳಿಸಿದ್ದಾರೆ.

ಇದು ಅವರ ಖಾತೆಯಲ್ಲಿ ದ್ವಿಗುಣಗೊಂಡಂತೆ ಕಂಡಿದ್ದು, ಹೆಚ್ಚಿನ ಲಾಭ ಸಿಗಬಹುದೆಂದು ಅವರು ಒಟ್ಟು ₹ 18.43 ಲಕ್ಷ ಪಾವತಿಸಿದ್ದಾರೆ. ಹೂಡಿಕೆ ಮಾಡಿರುವ ಹಣ ವಾಪಸ್ ಪಡೆಯಲು ಯತ್ನಿಸಿದಾಗ ಸಾಧ್ಯವಾಗಿಲ್ಲ. ಈ ವರೆಗೂ
ಹಣ ಮರುಪಾವತಿ ಆಗಿಲ್ಲ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT