ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ: ಜಿಲ್ಲೆಯ ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಗೆಲುವು

ಬಿಜೆಪಿ ಯುವ ಸಮಾವೇಶದಲ್ಲಿ ನಳಿನ್ ಕುಮಾರ್ ಭರವಸೆ
Last Updated 21 ಮಾರ್ಚ್ 2023, 5:25 IST
ಅಕ್ಷರ ಗಾತ್ರ

ಉಳ್ಳಾಲ: ‘ನಾನು ಸಮೀಕ್ಷೆಯ ವರದಿ ತೆಗೆದುಕೊಂಡೇ ಬಂದಿದ್ದೇನೆ. ಜಿಲ್ಲೆಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ’ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಕೊಲ್ಯದಲ್ಲಿ ಜರಗಿದ ಜಿಲ್ಲಾ ಬಿಜೆಪಿ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

‘ಎಸ್‍ಡಿಪಿಐ ಪಕ್ಷದ ಜೊತೆ ಹೊಂದಾಣಿಕೆ ರಾಜಕಾರಣ ಮಾಡಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದನ್ನು ಈ ಬಾರಿ ಏನು ಸಂಬಂಧ ಅಂತ ಹೇಳಬೇಕು. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ, ಪರಿವಾರ ರಾಜಕಾರಣ ಮೂರು ಕೊಡುಗೆಯಾಗಿದೆ. ಭಾರತ್ ಜೋಡೋ ಮಾಡಿದ್ದು ರಾಹುಲ್ ಗಾಂಧಿಯಲ್ಲ ನರೇಂದ್ರ ಮೋದಿಯವರು. ಏಕ್ ಭಾರತ್ ಶ್ರೇಷ್ಠ ಭಾರತ್ ಅನ್ನುವ ಕಲ್ಪನೆಯಲಿ ದೇಶ ನಿರ್ಮಿಸುತ್ತಿದ್ದಾರೆ‘ ಎಂದರು.

‘ನಮ್ಮ ಸರ್ಕಾರ ಬಂದರೆ ಪಿಎಫ್‌ಐ ನಿಷೇಧ ವಾಪಸ್ಸು ತೆಗೆದುಕೊಳ್ಳುತ್ತೇವೆ, ಗೋಹತ್ಯೆ ಕಾನೂನು ವಾಪಸ್ಸು ತೆಗೆಯುತ್ತೇವೆ, ಬಂಧನವಾಗಿರುವ ಭಯೋತ್ಪಾದಕರನ್ನು ಜೈಲಿನಿಂದ ಬಿಡಿಸುತ್ತೇವೆ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಇಂತಹ ಸರ್ಕಾರ ಬೇಕಾ ಎಂದು ಮುಂದಿನ ಚುನಾವಣೆಯಲ್ಲಿ ತೀರ್ಮಾನ ಮಾಡಬೇಕು ’ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ., ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಉತ್ತರ ಶಾಸಕ ಭರತ್ ಶೆಟ್ಟಿ, ವಿಭಾಗ ಸಹಪ್ರಭಾರಿ ರಾಜೇಶ್ ಕಾವೇರಿ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಶ್ವೇತಾ ಪೂಜಾರಿ , ಜಿಲ್ಲಾ ಯುವಮೋರ್ಚಾ ಪ್ರಭಾರಿ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಈಶ್ವರ್ ಕಟೀಲ್, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ, ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಕಸ್ತೂರಿ ಪಂಜ ಹಾಗೂ ಸುಧೀರ್ ಶೆಟ್ಟಿ ಕಣ್ಣೂರು, ರಾಮದಾಸ್ ಬಂಟ್ವಾಳ, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಜಯಶ್ರೀ ಕರ್ಕೇರ, ಮಾಧ್ಯಮ ಪ್ರಮುಖ ರಣದೀಪ್ ಕಾಂಚನ್, ಸಂದೇಶ್ ಶೆಟ್ಟಿ, ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ್, ಸೂರಜ್ ಜೈನ್ ಮಾರ್ನಾಡು, ಯಶವಂತ್ ಬೆಳಾಲ್, ಅಶ್ವತ್ ಪಣಪಿಲಾರ್, ಭರತ್ ರಾಜ್ ಕೃಷ್ಣಾಪುರ, ಸಚಿನ್ ರಾಜ್ ರೈ, ಸಚಿನ್ ಮೋರೆ, ಕಿಶೋರ್ ಪಲ್ಲಿಪ್ಪಾಡಿ, ಸಚಿನ್ ಶೆಣೈ, ನವೀನ್ ಪಡ್ನೂರು, ಶ್ರೀಕೃಷ್ಣ ಎಂ.ಆರ್, ಚೆನ್ನಪ್ಪ ಕೋಟ್ಯಾನ್, ಧನಲಕ್ಷ್ಮೀ ಗಟ್ಟಿ, ಆರ್.ಸಿ ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.
ಗುರುದತ್ ನಾಯಕ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT