ಬೆಳ್ತಂಗಡಿ: ಕಟ್ಟಿಹಾಕಿದ್ದ ಮನೆಯ ಸಾಕು ನಾಯಿಯನ್ನು ಬಿಡಲು ಹೋದ ಮಹಿಳೆಯ ಮೇಲೆ ಅದು ಗುರುವಾರ ಏಕಾಏಕಿ ದಾಳಿ ನಡೆಸಿದೆ. ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಂಡಾಜೆ ಗ್ರಾಮದ ನಿಡಿಗಲ್ ನಿವಾಸಿ ದಿ. ರಾಮದಾಸ್ ಪ್ರಭು ಅವರ ಪತ್ನಿ ಪೂರ್ಣಿಮಾ ಪ್ರಭು (49) ನಾಯಿ ಕಡಿತದಿಂದ ಗಾಯಗೊಂಡ ಮಹಿಳೆ.

ಪೂರ್ಣಿಮಾ ಅವರು ಬುಧವಾರ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಹೋಗಿದ್ದರು. ಗುರುವಾರ ಬೆಳಿಗ್ಗೆ ಮನೆಗೆ ಮರಳಿದ್ದ ಅವರು, ಕಟ್ಟಿಹಾಕಿದ್ದ ನಾಯಿಯನ್ನು ಬಿಡಲು ಹೋಗಿದ್ದರು. ಆಗ ನಾಯಿ ಏಕಾಏಕಿ ಅವರ ಮೇಲೆರಗಿತ್ತು. ನಾಯಿ ಕಡಿತದಿಂದ ಮಹಿಳೆಯ ತಲೆಯ ಭಾಗ, ಕುತ್ತಿಗೆ, ಕೈ ಸೇರಿದಂತೆ ಸುಮಾರು 20ಕ್ಕಿಂತ ಹೆಚ್ಚು ಕಡೆಗಳಿಗೆ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗೆ ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಯಿಯನ್ನು ಮನೆಯವರು ರೇಬಿಸ್ ಪರೀಕ್ಷೆ ನಡೆಸಿರಲಿಲ್ಲ. ಆ ನಾಯಿಯನ್ನು ಕೊಂದು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.