ಉಜಿರೆ: ರಾಜಸ್ತಾನದ ವಿಶ್ವಗುರು ಮಹಾಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದಜಿ ಭಾನುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ 1972ರ ಮೋಡೆಲ್ ಮರ್ಸಿಡಿಸ್ ಬೆಂಜ್ ಕಾರನ್ನು ಕೊಡುಗೆಯಾಗಿ ನೀಡಿದರು.

ಸ್ವಾಮೀಜಿಯವರು ಭಾನುವಾರ ಬೆಳಿಗ್ಗೆ ಹೆಗ್ಗಡೆಯವರ ನಿವಾಸದ ಎದುರು ಕಾರಿನ ಕೀ ಹಸ್ತಾಂತರಿಸಿದರು. 280 ಎಸ್. ಮಾದರಿಯ ಈ ಕಾರು ಉತ್ತಮ ಸ್ಥಿತಿಯಲ್ಲಿದೆ. ಹೆಗ್ಗಡೆಯವರು ಸ್ವಾಮೀಜಿಯವರನ್ನು ಗೌರವಿಸಿದರು.

ಕೆಲವು ವರ್ಷಗಳ ಹಿಂದೆ ಜಾಗತಿಕ ಯೋಗ ಸಮ್ಮೇಳನ ಉದ್ಘಾಟಿಸಲು ಸ್ವಾಮೀಜಿ ಧರ್ಮಸ್ಥಳಕ್ಕೆ ಬಂದಾಗ ಇಲ್ಲಿನ ಕಾರ್ ಮ್ಯೂಸಿಯಂ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸ್ವಾಮೀಜಿ ಯುರೋಪ್ ಖಂಡದ ಆಸ್ಟ್ರೀಯಾ ದೇಶದಲ್ಲಿ ತಮ್ಮ ಆಶ್ರಮ ಪ್ರಾರಂಭಿಸಿ ಅಲ್ಲಿ ಯೋಗ ಪ್ರಚಾರ ಮತ್ತು ಧರ್ಮ ಪ್ರಭಾವನಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೆಗಡೆಯವರೇ ಕಾರು ಚಾಲನೆ ಮಾಡಿದರು. ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.