‘30 ವರ್ಷಗಳ ಹೋರಾಟದ ಫಲವಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ₹ 40 ಲಕ್ಷ ಮೊತ್ತದಲ್ಲಿ ವಿನೂತನ ಶೈಲಿಯಲ್ಲಿ ಅಂಬೇಡ್ಕರ್ ವೃತ್ತವನ್ನು ನಿರ್ಮಿಸಲಾಗುತ್ತಿದೆ. ಈ ಹೋರಾಟದಲ್ಲಿ ಭಾಗವಹಿಸದ ಸ್ವಯಂಘೋಷಿತ ನಾಯಕರು ಉದ್ದೇಶಿತ ಕಾರ್ಯಕ್ರಮವನ್ನು ಹಾಳುಗೆಡವಲು ಯತ್ನಿಸಿದ್ದಾರೆ. ಜಿಲ್ಲೆಯ ಸಮಸ್ತ ದಲಿತ ಸಂಘಟನೆಗಳ ಒಮ್ಮತದಿಂದ, ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿರುವ ಶಂಕುಸ್ಥಾಪನೆಯನ್ನು ಒಬ್ಬ ವ್ಯಕ್ತಿ ಅಥವಾ ಸಂಘದ ವಿರೋಧಕ್ಕೆ ಮಣಿದು ರದ್ದು ಮಾಡಬಾರದು’ ಎಂದು ಸಮಿತಿಯ ಪ್ರಧಾನ ಸಂಚಾಲಕ ಎಂ.ದೇವದಾಸ್, ಉಪಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಒತ್ತಾಯಿಸಿದ್ದಾರೆ.