ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳವು ಅಹಿಂಸಾತ್ಮಕ ಸ್ಪರ್ಧಾ ಕೂಟ

ವೇಣೂರು ಸೂರ್ಯ-– ಚಂದ್ರ ಜೋಡುಕರೆ ಕಂಬಳದಲ್ಲಿ ರಮಾನಾಥ ರೈ
Last Updated 5 ಡಿಸೆಂಬರ್ 2022, 5:25 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಪರಂಪರಗತವಾಗಿ ಬಂದಿದ್ದ ಕಂಬಳವನ್ನು ಅಹಿಂಸೆಯ ಕೂಟ ಎಂದು ಸಾಬೀತುಪಡಿಸಲು ಹೋರಾಟ ಮಾಡಬೇಕಾಯಿತು. ಸೂರ್ಯ-ಚಂದ್ರ ಇರುವಷ್ಟು ದಿನ ವೇಣೂರು ಕಂಬಳ ಯಶಸ್ವಿಯಾಗಿ ಮುಂದುವರಿಯಲಿ’ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ವೇಣೂರು ಪೆರ್ಮುಡ ಹೊನಲು ಬೆಳಕಿನ 30ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳದಲ್ಲಿ ಅವರು ಮಾತನಾಡಿದರು.

ಸ್ಥಗಿತಗೊಂಡಿದ್ದ ಬಂಟ್ವಾಳದ ಮುಡೂರು-ಪಡೂರು ಕಂಬಳಕ್ಕೆ ದೇವಸಪಡೂರುನಲ್ಲಿ ಜಾಗ ಗುರುತಿಸಿ 24 ದಿನದಲ್ಲೇ ಕರೆ ನಿರ್ಮಿಸಲಾಗಿದೆ. ಮುಂಬರುವ ಮಾ.4 ರಂದು ಕಂಬಳ ನಡೆಯಲಿದ್ದು, ಬಂಟ್ವಾಳದ ಕಂಬಳ ಎಂದು ಹೆಸರಿಡಲಾಗಿದೆ ಎಂ ದರು.

ಮಾಜಿ ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ‘ಸಾಂಸ್ಕೃತಿಕ ಕ್ರೀಡೆಯಾಗಿರುವ ಕಂಬಳಕ್ಕೆ ಅಡ್ಡಿ ಆತಂಕ ಸಲ್ಲದು. ನಿರಾತಂಕವಾಗಿ ನಡೆಯಲು ಸರ್ಕಾರ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ನೆರವು ನೀಡಬೇಕು ಎಂದರು.

ತಹಶೀಲ್ದಾರ್ ಪೃಥ್ವಿ ಸಾನಿಕಂ,ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಗಂಗಾಧರ ಗೌಡ, ಪ್ರಮುಖರಾದ ಕೆ. ರಕ್ಷಿತ್ ಶಿವರಾಂ, ಸತ್ಯಜಿತ್ ಸುರತ್ಕಲ್, ಎರ್ಮಾಲ್ ರೋಹಿತ್ ಹೆಗ್ಡೆ, ರಂಜನ್ ಜಿ. ಗೌಡ, ಪದ್ಮಶೇಖರ ಜೈನ್, ಶೈಲೇಶ್ ಕುಮಾರ್ ಕುರ್ತೋಡಿ, ಸುನಿಲ್ ಕುಮಾರ್ ಬಜಗೋಳಿ, ಶಿಲ್ಪಾ ಕಾಶಿಪಟ್ಣ, ರಾಜಶೇಖರ ಶೆಟ್ಟಿ, ಸದಾನಂದ ಶೆಟ್ಟಿ ಬಂಟ್ವಾಳ, ನಿತೀಶ್ ಜೈನ್, ಪ್ರಮೋದ್ ಬಜಗೋಳಿ, ಸುಧಾಕರ ಶೆಟ್ಟಿ, ಜಯಶೀಲ, ಪ್ರವೀಣ್ ಪಿಂಟೊ, ಸುಧೀರ್ ಭಂಡಾರಿ, ನವೀನ್ ಪೂಜಾರಿ ಪಚ್ಚೇರಿ, ಓಬಯ್ಯ ಆರಂಬೋಡಿ, ಪ್ರದೀಪ್, ನಿರ್ಮಲ್ ಕುಮಾರ್, ಗಣೇಶ್ ಕುಕ್ಕೇಡಿ, ಪ್ರವೀಣ್ ಫೆರ್ನಾಂಡಿಸ್, ಅನಿಲ್ ಪೈ, ಪ್ರಜ್ವಲ್ ಜೆ., ವಂದನಾ ಭಂಡಾರಿ ಇದ್ದರು.

ಇರುವೈಲು ಪಾಣಿಲ ಬಾಡ ಪೂಜಾರಿ ನಿಧನಕ್ಕೆ ಮೌನಪ್ರಾರ್ಥನೆ ನಡೆಸಲಾಯಿತು.

ಸತೀಶ್ ಕೆ. ಕಾಶಿಪಟ್ಣ, ಹೊನ್ನಯ್ಯ ಕಾಟಿಪಳ್ಳ, ಸತೀಶ್ ದೇವಾಡಿಗ ಅರ್ವ, ರವಿಕುಮಾರ್ ಅಳದಂಗಡಿ, ಜಗದೀಶ್, ಸುಶಾಂತ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್ ಸ್ವಾಗತಿಸಿ, ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ ವಂದಿಸಿದರು. ಸತೀಶ್ ಹೊಸ್ಮಾರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT