ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಜನರಲ್ಲಿ ಕೋವಿಡ್–19 ದೃಢ: 10 ಮಕ್ಕಳಿಗೆ ಕೊರೊನಾ ಸೋಂಕು

ಮತ್ತೆ 17 ಮಂದಿ ಗುಣಮುಖ:
Last Updated 13 ಜೂನ್ 2020, 16:19 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮೊದಲ ಬಾರಿಗೆ ಒಂದೇ ದಿನದಲ್ಲಿ ಗರಿಷ್ಠ ಪ್ರಕರಣಗಳು ಪತ್ತೆಯಾಗಿದ್ದು, ಸೌದಿ ಅರೇಬಿಯಾದಿಂದ ಬಂದ 8 ಮತ್ತು ಮುಂಬೈನಿಂದ ಬಂದ ಇಬ್ಬರು ಮಕ್ಕಳು ಸೇರಿದಂತೆ 30 ಮಂದಿಗೆ ಕೋವಿಡ್‌–19 ಇರುವುದು ದೃಢವಾಗಿದೆ. ಶನಿವಾರ ಮತ್ತೆ 17 ಜನರು ಗುಣಮುಖರಾಗಿದ್ದು, ಒಟ್ಟು 146 ಮಂದಿ ಗುಣಮುಖರಾದಂತಾಗಿದೆ.

ಇದೇ 5 ಮತ್ತು 10 ರಂದು ಸೌದಿ ಅರೇಬಿಯಾದಿಂದ ಬಂದಿದ್ದ 25 ಮಂದಿ ಹಾಗೂ ಮುಂಬೈನಿಂದ ಬಂದಿರುವ ಐವರಲ್ಲಿ ಕೋವಿಡ್–19 ಖಚಿತವಾಗಿದೆ. ಇದೇ 5 ರಂದು ಸೌದಿ ಅರೇಬಿಯಾದಿಂದ ಬಂದಿದ್ದ 23, 24, 25, 28, 29, 30 ಹಾಗೂ 31 ವರ್ಷದ ಪುರುಷರಿಗೆ ಸೋಂಕು ತಗಲಿದೆ. ಮೇ 29 ರಂದು ಮುಂಬೈನಿಂದ ಬಂದು ಕ್ವಾರಂಟೈನ್‌ನಲ್ಲಿದ್ದ 40 ವರ್ಷದ ಪುರುಷ, ಇದೇ 4 ರಂದು ಮುಂಬೈನಿಂದ ಬಂದು ಕ್ವಾರಂಟೈನ್‌ನಲ್ಲಿದ್ದ 26 ಹಾಗೂ 46 ವರ್ಷದ ಪುರುಷರಿಗೆ ಸೋಂಕು ಇರುವುದು ಖಚಿತವಾಗಿದೆ. ಇದರ ಜತೆಗೆ ಇದೇ 5 ರಂದು ಮುಂಬೈನಿಂದ ಬಂದಿದ್ದ 1 ವರ್ಷದ ಗಂಡು ಮಗು ಹಾಗೂ 4 ವರ್ಷದ ಹೆಣ್ಣು ಮಗುವಿಗೂ ಸೋಂಕು ತಗಲಿದೆ.

ಮಕ್ಕಳೇ ಹೆಚ್ಚು: ಇದೇ 10 ರಂದು ಸೌದಿಯಿಂದ ನಗರಕ್ಕೆ ಬಂದಿದ್ದ ಜನರ ಪೈಕಿ 8 ಮಕ್ಕಳಿಗೆ ಕೋವಿಡ್–19 ಸೋಂಕು ತಗಲಿದೆ. 1 ವರ್ಷದ ಇಬ್ಬರು ಮಕ್ಕಳು, 2 ವರ್ಷದ ಗಂಡು ಮಗು, 2 ವರ್ಷದ ಹೆಣ್ಣು ಮಗು, 4 ವರ್ಷದ ಗಂಡು ಮಗು, 8 ವರ್ಷದ ಬಾಲಕ ಹಾಗೂ ಬಾಲಕಿ, 12 ವರ್ಷದ ಬಾಲಕನಿಗೆ ಕೋವಿಡ್‌–19 ಇರುವುದು ಖಚಿತವಾಗಿದೆ. ಈ ಪೈಕಿ 5 ವರ್ಷದ ಕೆಳಗಿನ ವಯೋಮಾನದ 7 ಮಕ್ಕಳು, 8 ರಿಂದ 14 ವಯೋಮಿತಿಯೊಳಗಿನ 3 ಮಕ್ಕಳಿದ್ದಾರೆ.

ಉಳಿದಂತೆ 20, 22, 25, 27, 29, 30, 55 ಹಾಗೂ 61 ವರ್ಷದ ಮಹಿಳೆಯರಿದ್ದು, ಇವರಲ್ಲಿ 6 ಮಂದಿ ಗರ್ಭಿಣಿಯರು ಸೋಂಕಿತರಾಗಿದ್ದಾರೆ. 24 ಹಾಗೂ 35 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.

ಬಾಲಕಿಯರು ಸೇರಿ 17 ಮಂದಿ ಗುಣಮುಖ

14 ಮತ್ತು 17 ವರ್ಷದ ಬಾಲಕಿಯರು ಸೇರಿ ಒಟ್ಟು 17 ಮಂದಿ ಶನಿವಾರ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

46 ವರ್ಷದ ಮಹಿಳೆ, 20 ಮತ್ತು 22 ವರ್ಷದ ಯುವಕರು, 32 ವರ್ಷದ ಪುರುಷ, 36 ವರ್ಷದ ಇಬ್ಬರು ಪುರುಷರು, 38, 40, 42 ವರ್ಷದ ಪುರುಷರು, 43 ವರ್ಷದ ಇಬ್ಬರು ಪುರುಷರು, 50, 57 ಹಾಗೂ 65 ವರ್ಷದ ವೃದ್ಧರು ಗುಣಮುಖರಾಗಿದ್ದಾರೆ. ಇವರ ಗಂಟಲು ದ್ರವದ ಮಾದರಿ ನೆಗೆಟಿವ್‌ ಬಂದಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT