ಶುಕ್ರವಾರ, ಸೆಪ್ಟೆಂಬರ್ 30, 2022
25 °C

ಸಾಲಕ್ಕಾಗಿ ಅಡವಿಟ್ಟ 401 ಗ್ರಾಂ ಚಿನ್ನ ನಕಲಿ– ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸಾಲ ಪಡೆಯಲು ಮೂವರು ವ್ಯಕ್ತಿಗಳು ನೀಡಿದ್ದ  ಒಟ್ಟು 401.7 ಗ್ರಾಂ ಚಿನ್ನಾಭರಣಗಳು ನಕಲಿ ಆಗಿವೆ ಎಂದು ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಬಂಡಿ ಜನಾರ್ದನ ರೆಡ್ಡಿ  ಅವರು ನಗರದ ದಕ್ಷಿಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘2020ರ ಸೆ. 12ರಿಂದ 2021ರ ಫೆ 18ರ ನಡುವೆ ಮೂವರು ಒಟ್ಟು 401.7 ಗ್ರಾಂ ಚಿನ್ನಾಭರಣಗಳನ್ನು ಅಡವಿಟ್ಟು ₹ 13.12 ಲಕ್ಷ ಸಾಲ ಪಡೆದಿದ್ದರು. ಅವರು ಸಾಲವನ್ನೂ ಮರುಪಾವತಿಸಿಲ್ಲ. ಅವರು ಅಡವಿಟ್ಟ ಚಿನ್ನ  22 ಕ್ಯಾರೆಟ್‌ನದ್ದಲ್ಲ. ಉದ್ದೇಶಪೂರ್ವಕವಾಗಿ ನಕಲಿ ಚಿನ್ನ ಅಡವಿಟ್ಟು ಅವರು ಸಂಸ್ಥೆಗೆ ನಂಬಿಕೆ ದ್ರೋಹ ಎಸಗಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು