ಮಂಗಳೂರು: ಇಲ್ಲಿನ ಕುಲಶೇಖರದ ಹಾಲಿನ ಡೇರಿ ಬಳಿಯ ಮನೆಯೊಂದರಲ್ಲಿ 87 ವರ್ಷದ ಮಾವನಿಗೆ ಸೊಸೆಯು ವಾಕಿಂಗ್ ಸ್ಟಿಕ್ನಿಂದ ಹಲ್ಲೆ ನಡೆಸಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಆರೋಪಿಯಾಗಿರುವ ಮೆಸ್ಕಾಂ ಸಿಬ್ಬಂದಿ ಉಮಾಶಂಕರಿ (47) ಎಂಬುವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಪದ್ಮನಾಭ ಹಲ್ಲೆಗೊಳಗಾದವರು. ಅವರ ಮಗ ಪ್ರೀತಮ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪದ್ಮನಾಭ ಅವರು ಸೊಸೆಯೊಂದಿಗೆ (ಮಗನ ಪತ್ನಿ) ಕುಲಶೇಖರದ ಮನೆಯಲ್ಲಿ ವಾಸವಿದ್ದಾರೆ.

‘ನೀವು ಯಾಕೆ ಈ ಮನೆಯಲ್ಲಿದ್ದೀರಿ’ ಎಂದು ಸೊಸೆ ಆಗಾಗ ನನ್ನ ಜೊತೆ ತಗಾದೆ ತೆಗೆಯುತ್ತಿದ್ದಳು. ಧರಿಸಿದ್ದ ಅಂಗಿಯನ್ನು ತೆಗೆದು ಸೋಫಾದ ಮೇಲೆ ಇಟ್ಟಿದ್ದಕ್ಕೆ ಶನಿವಾರ ಜಗಳ ತೆಗೆದ ಸೊಸೆ ವಾಕಿಂಗ್ ಸ್ಟಿಕ್ನಿಂದ ಕಾಲಿಗೆ ಸೊಂಟಕ್ಕೆ ಹಲ್ಲೆ ನಡೆಸಿದ್ದಾಳೆ. ಹಲ್ಲೆಯನ್ನು ತಡೆದಾಗ ಅವರನ್ನೇ ಸೋಫಾ ಸೆಟ್ ಮೇಲೆ ದೂಡಿ, ’ಸತ್ತು ಹೋಗು’ ಎಂದು ತುಳುವಿನಲ್ಲಿ ಬೈದಿದ್ದಳು’ ಎಂದು ಸಂತ್ರಸ್ತ ಪದ್ಮನಾಭ ಅವರು ಆರೋಪಿಸಿದ್ದಾರೆ. ಹಲ್ಲೆಯಿಂದ ಅವರ ಬಲ ಮೊಣಕೈನಲ್ಲಿ ಹಾಗೂ ಎಡಕಣ್ಣಿನ ಹುಬ್ಬಿನ ಬಳಿ ಊದಿದ ಗಾಯಗಳಾಗಿವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸೊಸೆ ತಮ್ಮನ್ನು ಕೊಲೆ ಮಾಡಬಹುದು ಎಂಬ ಭಯದಿಂದ ಪದ್ಮನಾಭ ಅವರು ಮಾರ್ನಮಿಕಟ್ಟೆಯಲ್ಲಿರುವ ತಮ್ಮ ರಮೇಶ್ ಮನೆಗೆ ಹೋಗಿದ್ದರು. ಬಳಿಕ ಮೂಡುಬಿದಿರೆಯಲ್ಲಿರುವ ಮಗಳು ಪ್ರಿಯಾಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಹಲ್ಲೆಯ ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅವುಗಳ ವಿಡಿಯೋವನ್ನು ಪ್ರೀತಮ್ ತನ್ನ ಸೋದರಿ ಪ್ರಿಯಾ ಅವರಿಗೆ ಕಳುಹಿಸಿದ್ದರು. ವೃದ್ಧ ತಂದೆಗೆ ಅತ್ತಿಗೆ ಉಮಾಶಂಕರಿ ಹಲ್ಲೆ ನಡೆಸಿದ ಬಗ್ಗೆ ಪ್ರಿಯಾ ಅವರು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.