ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನ್ಯಾಪ್ಟಿಕಾನ್ 2022' ಸಮ್ಮೇಳನ 28ರಿಂದ

Last Updated 21 ಅಕ್ಟೋಬರ್ 2022, 9:15 IST
ಅಕ್ಷರ ಗಾತ್ರ

ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ (ಎಫ್‌ಎಂಎಂಸಿ ) ಔಷಧ ವಿಜ್ಞಾನ ವಿಭಾಗ ಹಾಗೂ ನ್ಯಾಷನಲ್ ಅಸೋಸಿಯೇಷನ್ ಆಫ್‌ ಫಾರ್ಮಕಾಲಜಿ ಆ್ಯಂಡ್‌ ಥೆರಪೆಟಿಕ್ಸ್‌ (ಎನ್‌ಪಿಟಿ) ಸಹಯೋಗದಲ್ಲಿ ಇದೇ28 ಮತ್ತು 29ರಂದು ‘ನ್ಯಾಪ್ಟಿಕಾನ್ 2022’ ಮೊದಲನೇ ರಾಷ್ಟ್ರೀಯ ವಾರ್ಷಿಕ ಸಮ್ಮೇಳನವನ್ನುಆಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಎನ್‌ಪಿಟಿ ಅಧ್ಯಕ್ಷೆ ಡಾ.ಪದ್ಮಜಾ ಉದಯ್‌ಕುಮಾರ್‌, ‘ಸಮಕಾಲೀನ ಬೆಳವಣಿಗೆಗೆ ಅನುಗುಣವಾಗಿ ಔಷಧ ವಿಜ್ಞಾನದ ಪರಿಣತಿ’ ಕುರಿತು ಔಷಧ ವಿಜ್ಞಾನ ತಜ್ಞರು ಸಮ್ಮೇಳನದಲ್ಲಿ ವಿಚಾರ ಮಂಡಿಸಲಿದ್ದಾರೆ. ದೇಶದ ವಿವಿಧ ಭಾಗಗಳಿಂದ 500 ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಔಷಧ ವಿಜ್ಞಾನ ಕ್ಷೇತ್ರದ ಪರಿಣಿತರು ಭಾಗವಹಿಸಲಿದ್ದಾರೆ. ಯೆನಪೋ‌ಯ ಡೀಮ್ಡ್‌ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ವಿಜಯ ಕುಮಾರ್, ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕ ಫಾ. ರಿಚರ್ಡ್ ಅಲೋಶಿಯಸ್ ಕೊಯೆಲ್ಲೊ ಅಧ್ಯಕ್ಷತೆ ವಹಿಸಲಿದ್ದಾರೆ. ಪೂರ್ವ ಸಮ್ಮೇಳನ ಕಾರ್ಯಾಗಾರವು ಇದೇ 27ರಂದು ನಡೆಯಲಿದೆ’ ಎಂದರು.

ಫಾ.ರಿಚರ್ಡ್ ಅಲೋಶಿಯಸ್ ಕೊಯೆಲ್ಲೊ, ‘ವೈದ್ಯಕೀಯ ಔಷಧ ವಿಜ್ಞಾನಿಗಳ ‌ರಾಷ್ಟ್ರ ಮಟ್ಟದ ಸಂಘಟನೆಯಾದ ಎನ್‌ಪಿಟಿ ಅನೇಕ ಮೈಲುಗಲ್ಲುಗಳನ್ನು ದಾಟಿದೆ. ಈ ಕ್ಷೇತ್ರದ ಈಚಿನ ಬೆಳವಣಿಗೆಗಳ ಬಗ್ಗೆ ಸಮ್ಮೇಳನವು ಬೆಳಕು ಚೆಲ್ಲಲಿದೆ’ ಎಂದರು.

ಎಫ್‌ಎಂಎಂಸಿ ಆಡಳಿತಾಧಿಕಾರಿ ಫಾ.ಅಜಿತ್ ಬಿ. ಮನೇಜಸ್ , ಡೀನ್‌ ಡಾ.ಆಂಟನಿ ಸಿಲ್ವನ್ ಡಿಸೋಜಾ ಹಾಗೂ ಕಾರ್ಯಕ್ರಮದ ಜಂಟಿ ಸಂಘಟನಾ ಕಾರ್ಯದರ್ಶಿಗಳಾದ ಡಾ. ನಿಕೋಲ್ ಪಿರೇರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT