ಮಂಗಳವಾರ, ಸೆಪ್ಟೆಂಬರ್ 22, 2020
25 °C

ದಕ್ಷಿಣ ಕನ್ನಡ | ಸತತ ಮಳೆ: ಮೈದುಂಬಿದ ನದಿಗಳು, ಜಮೀನಿಗೆ ನುಗ್ಗಿದ ನದಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಳೆಯ ಅಬ್ಬರ ಶುಕ್ರವಾರವೂ ಮುಂದುವರಿದಿದೆ. ಪಶ್ಚಿಮ ಘಟ್ಟದಲ್ಲಿ ಸತತ ಮಳೆ ಸುರಿಯುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.

ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಸತತ ಐದನೇ ದಿನವೂ ಜಲಾವೃತಗೊಂಡಿದೆ.

ಶೌಚಾಲಯ, ಸ್ನಾನಗೃಹ, ಲಗೇಜ್ ಕೊಠಡಿಗಳಿಗೆ ನೀರು ನುಗ್ಗಿದೆ. ಕೃಷಿ ತೋಟಗಳಿಗೂ ಕುಮಾರಧಾರಾ ನದಿ ನೀರು ನುಗ್ಗಿದೆ.
ಬಿಸಿಲೆ ಘಾಟ್ ನಲ್ಲಿ ಮತ್ತೆ ಕೆಲವು ಕಡೆ ಗುಡ್ಡ ಜರಿತವಾಗಿದ್ದು, ಬಿಸಿಲೆ ಘಾಟ್- ಸುಬ್ರಹ್ಮಣ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಗುರುವಾರ ರಾತ್ರಿ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತಗೊಂಡು ಸಂಚಾರಕ್ಕೆ ತೊಡಕಾಗಿದೆ.

ಅಲೆಖಾನ್ ಸಮೀಪ ಗುಡ್ಡ ಕುಸಿತಗೊಂಡ ಪರಿಣಾಮ ಶುಕ್ರವಾರ ಮುಂಜಾನೆ ವೇಳೆ ವಾಹನ ಸಂಚಾರಕ್ಕೆ ಮತ್ತೆ ಅಡ್ಡಿಯಾಗಿದೆ. ಸದ್ಯ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಸಾಗುತ್ತಿದ್ದು, ಒಂದು ಜಿಸಿಬಿ ನಿಯೋಜಿಸಲಾಗಿದೆ.


ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿದಿದೆ

 


ಕುಕ್ಕೆ ಸುಬ್ರಹ್ಮಣದಲ್ಲಿ ಕುಮಾರಧಾರಾ ಪ್ರವಾಹ

 


ಕುಕ್ಕೆ ಸುಬ್ರಹ್ಮಣದಲ್ಲಿ ಕುಮಾರಧಾರಾ ಪ್ರವಾಹ

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು