ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ: ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ

Last Updated 21 ಮಾರ್ಚ್ 2023, 5:22 IST
ಅಕ್ಷರ ಗಾತ್ರ

ಉಳ್ಳಾಲ: ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ತಾರು ಜಂಕ್ಷನ್ನ, ತೊಕ್ಕೊಟ್ಟು ನಂತರ ಅತ್ಯಂತ ಅಭಿವೃದ್ಧಿಯ ಜಂಕ್ಷನ್ ಆಗಿ ಬದಲಾವಣೆಯಾಗಿದೆ. ₹2.5 ಕೋಟಿ ಅನುದಾನದಡಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ಶೀಘ್ರವೇ ತಲೆ ಎತ್ತಲಿದೆ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿದರು.

ಅವರು ಮುನ್ನೂರು ಗ್ರಾ.ಪಂ ವ್ಯಾಪ್ತಿಯ ಕುತ್ತಾರು ಜಂಕ್ಷನ್‌ನ ಸರ್ಕಾರಿ ಸ್ಥಳದಲ್ಲಿ ನಿರ್ಮಾಣಗೊಳ್ಳಲಿರುವ ಮುನ್ನೂರು ಗ್ರಾ.ಪಂ.ನ ಕಮರ್ಷಿಯಲ್ ಕಾಂಪ್ಲೆಕ್ಸ್ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.

ಆಧುನಿಕ ತಂತ್ರಜ್ಞಾನಗಳನ್ನು ಕಾಂಪ್ಲೆಕ್ಸ್ ಒಳಗೊಂಡಿರುತ್ತದೆ. ಈ ಮೂಲಕ ಗ್ರಾಮದ ಜನರಿಗೆ ಸಹಕಾರದ ಜೊತೆಗೆ ಪಂ.ಗೆ ಆದಾಯ ತರುವ ವ್ಯವಸ್ಥೆಯೂ ಆಗಲಿದೆ. ಚರ್ಚ್, ಮಸೀದಿ ಧರ್ಮಗುರುಗಳ ಹಾಗೂ ದೇವಸ್ಥಾನ ಅರ್ಚಕರಿಂದ ಪೂಜೆ ನೆರವೇರಿಸಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಅತಿ ಶೀಘ್ರದಲ್ಲಿ ನಿಟ್ಟೆ ಸಂಸ್ಥೆಯವರು ಕುತ್ತಾರು ಜಂಕ್ಷನ್ನಿನಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣ, ರಿಕ್ಷಾ ತಂಗುದಾಣವನ್ನು ನಿರ್ಮಿಸಿ ಕೊಡಲಿದ್ದಾರೆ ಎಂದರು.

ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಲ್‌ಫ್ರೆಡ್‌ ಡಿ‘ಸೋಜ, ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಹಸನಬ್ಬ, ವನಿತಾ ಶೆಟ್ಟಿ, ಕವಿತಾ ಚಂದ್ರಕಲ, ಪುಷ್ಪ ಅಂಚನ್, ಕೇಶವ, ಮಹಾಬಲ ದಪ್ಪೆಲಿಮಾರ್, ನವೀನ್ ಡಿಸೋಜ, ಕಿರಣ್, ರೆಹನಾ ಭಾನು, ಮಾಜಿ ಅಧ್ಯಕ್ಷೆ ಐಸಮ್ಮ, ಮಾಜಿ ಸದಸ್ಯ ಉಸ್ಮಾನ್ ಫಯಾಜ್ ಎಂ, ಇಸ್ಮಾಯಿಲ್, ತಾ.ಪಂ.ಮಾಜಿ ಸದಸ್ಯೆ ವಿಲ್ಮಾ , ವೆಂಕಪ್ಪ, ಜೀವನ್ ಪೆರಾವೊ ವಾಝಿ ಡಿಸೋಜ, ಗ್ರೇಸಿ ಡಿಸೋಜ, ಲಕ್ಷ್ಮಣ್ ನಾಯಕ್ , ಸುರೇಶ್ ಭಟ್ನಗರ್ , ಅಭಿವೃದ್ಧಿ ಅಧಿಕಾರಿ ರಾಜೀವ ನಾಯ್ಕ್, ಕಾರ್ಯದರ್ಶಿ ಶಾಂತಿ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT