ಎರಡು ಬದಿ ಗ್ಯಾಲರಿ ಅಳವಡಿಸಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ಒಂದು ಬದಿ ಗ್ಯಾಲರಿ ಕುಸಿತಗೊಂಡಿದೆ. ಇದರಿಂದಾಗಿ ನಾಲ್ವರು ಗಾಯಗೊಂಡಿದ್ದು, ಒಬ್ಬ ವ್ಯಕ್ತಿ ಕಾಲಿಗೆ ಗಂಭೀರ ಗಾಯಗೊಂಡಿದೆ. ಈ ಕೋಳಿ ಅಂಕಕ್ಕೆ ಪೊಲೀಸರಿಂದ ಪರವಾನಿಗೆ ಪಡೆಯದ ಹಿನ್ನೆಲೆಯಲ್ಲಿ ಆಯೋಜಕರು ಕೂಡಲೇ ಕೋಳಿ ಅಂಕ ಸ್ಥಗಿತಗೊಳಿಸಿದರು. ಇದೇ ರೀತಿ ತಾಲ್ಲೂಕಿನ ವಿವಿಧೆಡೆ ಗ್ಯಾಲರಿ ಅಳವಡಿಸಿ ಮೂರು ದಿನಗಳ ಹೊನಲು ಬೆಳಕಿನ ಕೋಳಿ ಅಂಕ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.