ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಜ್ಜೆಗಿರಿ ಮೇಳದ ಉದ್ಘಾಟನೆ:ಆಮಂತ್ರಣ ಪತ್ರಿಕೆ ಬಿಡುಗಡೆ

Last Updated 13 ನವೆಂಬರ್ 2022, 6:43 IST
ಅಕ್ಷರ ಗಾತ್ರ

ಬೆಳ್ತಂಗಡಿ: ಗೆಜ್ಜೆಗಿರಿ ಕ್ಷೇತ್ರದಲ್ಲಿ ನ.27ರಂದು ನಡೆಯುವ ‘ಶ್ರೀಆದಿ ಧೂಮಾವತಿ ದೇಯಿ ಬೈದ್ಯೆತಿ ಯಕ್ಷಗಾನ ಮಂಡಳಿ’ಯ ಉದ್ಘಾಟನೆ ಹಾಗೂ ಪ್ರಥಮ ಗೆಜ್ಜೆ ಸೇವೆಯ ಆಮಂತ್ರಣ ಪತ್ರಿಕೆಯನ್ನು ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ಶನಿವಾರ ಬಿಡುಗಡೆ ಮಾಡಿದರು.

ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಪೀತಾಂಬರ ಹೇರಾಜೆ ಯಕ್ಷಗಾನ ಮೇಳದ ಉದ್ದೇಶವನ್ನು ವಿವರಿಸಿದರು.

ಯಕ್ಷಗಾನ ಮೇಳದ ಮುಖ್ಯಸಂಚಾಲಕ ನವೀನ್ ಸುವರ್ಣ ಸಜೀಪ, ಕ್ಷೇತ್ರಾಡಳಿತ ಸಮಿತಿಯ ಸದಸ್ಯೆ ಸುಜಿತಾ ವಿ. ಬಂಗೇರ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಮಾಜಿ ಅಧ್ಯಕ್ಷರಾದ ಪದ್ಮನಾಭ ಮಾಣಿಂಜ, ರಾಜು ಪೂಜಾರಿ, ಭಗೀರಥ ಜಿ, ಬೆಸ್ಟ್ ಫೌಂಡೇಷನ್‌ನ ಅಧ್ಯಕ್ಷ ರಕ್ಷಿತ್ ಶಿವರಾಂ, ಸಂಘದ ಪ್ರಧಾನ ಕಾರ್ಯದರ್ಶಿ ಜಯವಿಕ್ರಂ, ಕೋಶಾಧಿಕಾರಿ ಅಭಿನಂದನ್ ಹರೀಶ್ ಕುಮಾರ್, ಕಾರ್ಯದರ್ಶಿ ರಾಜೀವ ಸಾಲ್ಯಾನ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಪೂಜಾರಿ, ಯುವವಾಹಿನಿ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ, ರಾಜಶ್ರೀ ರಮಣ್, ಶಾಂತಾ ಬಂಗೇರ, ಯಶೋದಾ ಕುತ್ಲೂರು, ಪ್ರೇಮಾ ಉಮೇಶ್, ವಿನೋದಿನಿ ರಾಮಪ್ಪ, ನಾರಾಯಣ ಮಚ್ಚಿನ, ಜಗದೀಶ್ ಡಿ, ದಿನೇಶ್ ಕೋಟ್ಯಾನ್, ಮನೋಹರ ಇಳಂತಿಲ, ಪದ್ಮನಾಭ ಸಾಲ್ಯಾನ್, ಹಿತೇಶ್, ಸಂತೋಷ್ ಕಾಪಿನಡ್ಲ, ಸಂಪತ್ ಸುವರ್ಣ, ಡಿ.ಕೆ.ಸೂರ್ಯನಾರಾಯಣ, ರಮೇಶ್ ಪೂಜಾರಿ, ಯಶೋಧರ ಚಾರ್ಮಾಡಿ ಇದ್ದರು.

ನಿತ್ಯಾನಂದ ನಾವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT