ಬುಧವಾರ, ಏಪ್ರಿಲ್ 21, 2021
32 °C

ಗುಡ್‌ಫ್ರೈಡೆ: ಕ್ರೈಸ್ತರಿಂದ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಯೇಸು ಕ್ರಿಸ್ತ ಶಿಲುಬೆಗೇರಿದ ದಿನವನ್ನು ಗುಡ್‌ಫ್ರೈಡೆಯಾಗಿ ಕ್ರೈಸ್ತರು ಶುಕ್ರವಾರ ಆಚರಿಸಿದರು.

ಇದು ಕ್ರೈಸ್ತ ಸಮುದಾಯಕ್ಕೆ ಪವಿತ್ರ ದಿನವಾಗಿದ್ದು, ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಈ ದಿನವನ್ನು ಆಚರಿಸುತ್ತಿದ್ದಾರೆ. ನಗರದ ಚರ್ಚ್‌ಗಳಲ್ಲಿ ಬೆಳಿಗ್ಗೆಯಿಂದಲೇ ಪ್ರಾರ್ಥನೆಗಳು ನಡೆಯುತ್ತಿವೆ.

ನಗರದಲ್ಲಿ ಕ್ರೈಸ್ತ ಬಾಂಧವರು ಶ್ರದ್ದೆ ಹಾಗೂ ಭಕ್ತಿಯಿಂದ ಗುಡ್‌ ಫ್ರೈಡೇ ಆಚರಿಸುತ್ತಿದ್ದು, ಬೆಳಿಗ್ಗೆಯಿಂದ ಉಪವಾಸದಮೂಲಕ ವ್ರತ ಆಚರಿಸುತ್ತಿದ್ದಾರೆ. ಸಾವಿರಾರು ಭಕ್ತರು ನಗರದ ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಗುಡ್‌ ಫ್ರೈಡೇ ಕೇವಲ ಒಂದು ದಿನದ ಆಚರಣೆಯಲ್ಲ. ಈ ಸಮಯದಲ್ಲಿ ಮಾಂಸಾಹಾರ ಸೇವಿಸುವಂತಿಲ್ಲ ಹಾಗೂ ಮೋಜಿನ ಬದುಕು ನಡೆಸುವಂತಿಲ್ಲ. ಯಾವುದೇ, ಶುಭ ಸಮಾರಂಭಗಳೂ ಕೂಡಾ ನಡೆಯುವುದಿಲ್ಲ. ಈಸ್ಟರ್‌ ದಿನದಂದು ತಪಸ್ಸಿನ ಕಾಲಕ್ಕೆ ವಿದಾಯ ಹೇಳಲಾಗುತ್ತದೆ. ಈಸ್ಟರ್ ಭಾನುವಾರ ಏಸುಕ್ರಿಸ್ತರ ಪುನರುತ್ಥಾನ ಕೊಂಡಾಡುವ ಸಂಭ್ರಮದ ದಿನವಾಗಿದೆ.

ಶುಭ ಶುಕ್ರವಾರದ ದಿನ ಚರ್ಚ್‌ಗಳಲ್ಲಿ ಗಂಟೆಗಳ ಧ್ವನಿ ಇರುವುದಿಲ್ಲ. ಬಲಿ ಪೂಜೆಯ ಸಂಭ್ರಮವೂ ನಡೆಯುವುದಿಲ್ಲ.

‘ಗುಡ್‌ಫ್ರೈಡೆ ಪ್ರಯುಕ್ತ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ (ವೆ ಆಫ್‌ ದಿ ಕ್ರಾಸ್‌), ಶಿಲುಬೆಯ ಆರಾಧನೆ ಮತ್ತು ಇತರ ಕಾರ್ಯಕ್ರಮಗಳು ನಡೆಯಲಿವೆ. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ  ನಿಯಮಗಳನ್ನು ಪಾಲಿಸಿ ಈ ಪವಿತ್ರ ಸಪ್ತಾಹದ ಕಾರ್ಯಕ್ರಮಗಳನ್ನು ಸರಳ ರೀತಿಯಲ್ಲಿ ನಡೆಸಲಾಗುತ್ತದೆ’ ಎಂದು ಮಂಗಳೂರು ಬಿಷಪ್‌ ರೆ.ಡಾ. ಪೀಟರ್‌ ಪಾವ್ಲ್ ಸಲ್ಡಾನ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.