ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಂಕಾರ ತೊರೆದರೆ ಜೀವನದಲ್ಲಿ ಉನ್ನತಿ

ಶ್ರೀಗುರು ಸ್ಮೃತಿ ಕಾರ್ಯಕ್ರಮ ಉದ್ಘಾಟಿಸಿದ ಪ್ರೊ.ಪಿ.ಎಲ್‌. ಧರ್ಮ
Last Updated 3 ಸೆಪ್ಟೆಂಬರ್ 2020, 3:56 IST
ಅಕ್ಷರ ಗಾತ್ರ

ಮಂಗಳೂರು: ಮೂಢನಂಬಿಕೆ ತೊರೆದು ವೈಜ್ಞಾನಿಕವಾಗಿ ಅವಲೋಕಿಸುವ ಗುಣವನ್ನು ಎಲ್ಲರೂ ಮೈಗೂಡಿಸುವಂತೆ ಬ್ರಹ್ಮ ಶ್ರೀ ನಾರಾಯಣ ಗುರುಗಳು ನೀಡಿರುವ ಸಂದೇಶ ಎಂದೆಂದಿಗೂ ಅನುಕರಣೀಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್.ಧರ್ಮ ಹೇಳಿದರು.

ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಬಳಗ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಹಾಗೂ ಯುವವಾಹಿನಿ ಕೊಲ್ಯ ಘಟಕಗಳ ಸಹಭಾಗಿತ್ವದಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಗ್ಲಾಸ್‌ಹೌಸ್‌ನಲ್ಲಿ ಬುಧವಾರ ನಡೆದ ‘ಶ್ರೀ ಗುರು ಸ್ಮೃತಿ-2020’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗುರುಗಳು ಮೌಲ್ಯಾಧಾರಿತ ಜೀವನಕ್ಕೆ ಅಗತ್ಯವಿರುವ ಹಲವು ತತ್ವಗಳನ್ನು ಬೋಧಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಅಹಂಕಾರ ತ್ಯಾಗ ಮಾಡುವ ಬಗ್ಗೆ ವಿಶೇಷವಾಗಿ ಅವರು ಕರೆ ನೀಡಿದ್ದಾರೆ. ಮನುಷ್ಯ ಅಹಂಕಾರವನ್ನು ತೊರೆದು ಜೀವಿಸಿದರೆ ಆತ ಜೀವನದಲ್ಲಿ ಉನ್ನತಿಯನ್ನು ಕಾಣಲು ಸಾಧ್ಯ. ಹೀಗಾಗಿ ಅಹಂಕಾರ ತೊರೆದು ಜೀವಿಸುವ ಬಗ್ಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಯುವ ಸಮುದಾಯದ ಪರಿವರ್ತನೆಯ ಸಂಕಲ್ಪದೊಂದಿಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ನಿರ್ಮಿಸಲಾಗಿದೆ. ಈ ಮೂಲಕ ಹೊಸ ಬದಲಾವಣೆಯ ಕನಸೊಂದು ಸಾಕಾರವಾಗಲಿ ಎಂದು ಆಶಿಸಿದರು.

ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಉಪನ್ಯಾಸ ನೀಡಿದರು. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಸಮಾಜ ಸೇವಕ ಶಶಿರಾಜ್ ಕುಂಪಲ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ, ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷ ರವಿ ಕೊಂಡಾಣ, ಕೊಲ್ಯ ಘಟಕದ ಯುವವಾಹಿನಿಯ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕ ಜಗಜೀವನ್ ಕೊಲ್ಯ ವೇದಿಕೆಯಲ್ಲಿದ್ದರು.

ಶ್ರೀರಕ್ಷಾ ಎಸ್.ಎಚ್.ಪೂಜಾರಿ ಹಾಡಿರುವ ‘ಮನುಕುಲ ದೀಪ’ ಶೀರ್ಷಿಕೆಯ ಬ್ರಹ್ಮಶ್ರೀ ನಾರಾಯಣ ಗುರುದೇವರ ಭಕ್ತಿಸುಧೆಯ ವಿಡಿಯೊ ಬಿಡುಗಡೆ ಮಾಡಲಾಯಿತು. ಬಿಲ್ಲವ ಸಮಾಜದ ಅರ್ಹ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಪ್ರಜ್ಞಾ ಒಡಿನಾಳ ನಿರೂಪಿಸಿದರು.

ಗುರುಜಯಂತಿ ಆಚರಣೆ

ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಸ್ಥಾಪನೆಯಾದ ಇಲ್ಲಿನ ಗಾಂಧಿನಗರದ ಶ್ರೀ ವೆಂಕಟೇಶ ಶಿವಭಕ್ತಿಯೋಗ ಸಂಘದ ಆಶ್ರಯದಲ್ಲಿ ಬುಧವಾರ ಸರಳ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುರುಜಯಂತಿಯನ್ನು ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಆಚರಿಸಲಾಯಿತು.

ಗೋಕರ್ಣನಾಥ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಉದ್ಘಾಟಿಸಿದರು. ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷರಾದ ಎಂ.ಶೇಖರ್ ಪೂಜಾರಿ, ಡಾ.ಬಿ.ಜಿ. ಸುವರ್ಣ, ಶಿಕ್ಷಣ ಸಂಸ್ಥೆಯ ಸಂಚಾಲಕ ಎಸ್. ಜಯವಿಕ್ರಮ್, ಕಾರ್ಯದರ್ಶಿ ವಸಂತ ಕಾರಂದೂರು, ಸದಸ್ಯರಾದ ಕೆ. ಪ್ರವೀಣ್ ಕುಮಾರ್, ನಾರಾಯಣ ಕೋಡಿಕಲ್, ಪದ್ಮನಾಭ ಕೋಟ್ಯಾನ್, ಚಂದನದಾಸ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪಾಲಿಕೆ ಸದಸ್ಯ ಅನಿಲ್ ಕುಮಾರ್, ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಭಾಗವಹಿಸಿದ್ದರು. ಡಾ.ಉಮ್ಮಪ್ಪ ಪೂಜಾರಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT