ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಾಲ್ ಬಹಿಷ್ಕಾರ ಆಂದೋಲನವಾಗಲಿ

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಸಿಂಧೆ ಹೇಳಿಕೆ
Last Updated 21 ಅಕ್ಟೋಬರ್ 2022, 6:08 IST
ಅಕ್ಷರ ಗಾತ್ರ

ಪುತ್ತೂರು: ‘ಅಲ್ಪಸಂಖ್ಯಾತ ಮುಸ್ಲಿಮರು ಪಾಲಿಸಬೇಕಾದ ಹಲಾಲ್ ವ್ಯವಸ್ಥೆಯನ್ನು ಇಂದು ಬಹುಸಂಖ್ಯಾತ ಹಿಂದೂಗಳು ತಮಗೆ ಅರಿವಿಲ್ಲದೆಯೇ ಬೆಂಬಲಿಸುತ್ತಿದ್ದಾರೆ. ಈ ಕುರಿತು ಹಿಂದೂಗಳು ತಕ್ಷಣ ಎಚ್ಚೆತ್ತುಕೊಂಡು ಹಲಾಲ್ ಪ್ರೇರಣೆಯ ಬಳಕೆಯನ್ನು ಬಹಿಷ್ಕರಿಸಬೇಕಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಸಿಂಧೆ ಹೇಳಿದರು.

ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಅಭಿನವ ಭಾರತ ಮಿತ್ರಮಂಡಳಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾದ ಹಲಾಲ್ ವಿರುದ್ಧದ ಜಾಗೃತಿ ಸಭೆಯಲ್ಲಿ ಹಲಾಲ್ ಅರ್ಥ ವ್ಯವಸ್ಥೆಯ ಕುರಿತು ಅವರು ಮಾಹಿತಿ ನೀಡಿದರು.

‘2013ರಲ್ಲಿ ವಿಶ್ವ ಹಲಾಲ್ ಸಮ್ಮೇಳನ ವಿದೇಶದಲ್ಲಿ ನಡೆದಿತ್ತು. ಅಲ್ಲಿ ಹಲಾಲ್ ಇದ್ದಲ್ಲಿ ಮಾತ್ರ ಖರೀದಿಸುವಂತೆ ಫರ್ಮಾನು ಹೊರಡಿಸಲಾಗಿತ್ತು. ಜಮೀಯತ್ ಉಲಮಾ ಇ ಹಿಂದ್‌ಗೆ ಹಲಾಲ್ ಪ್ರಮಾಣಪತ್ರ ನೀಡುವ ಅಧಿಕಾರ ನೀಡಲಾಯಿತು. ಭಯೋತ್ಪಾದನೆಗಿಂತಲೂ ಸುಲಭ ವಾಗಿ ಹಲಾಲ್ ಆರ್ಥಿಕತೆಯ ಮೂಲಕ ಜಗತ್ತನ್ನು ಹಾಗೂ ಮುಸ್ಲಿಮೇತ ರರನ್ನು ಮುಗಿಸುವ ಹುನ್ನಾರ ಆರಂಭಿಸ ಲಾಯಿತು. ಇದನ್ನು ಅರಿಯದ ಜನರು ಸುಲಭವಾಗಿ ಹಲಾಲ್ ಆರ್ಥಿಕತೆಯ ಎದುರು ಮಂಡಿಯೂರುತ್ತಿದ್ದಾರೆ’ ಎಂದು ಹೇಳಿದರು.

ಆಹಾರಕ್ಕೆ ಮಾತ್ರ ಉಲ್ಲೇಖಿಸಲ್ಪಟ್ಟ ಹಲಾಲ್ ಇಂದು ಔಷಧಿ, ಕಾಸ್ಮೆಟಿಕ್, ಡೇಟಿಂಗ್ ಆಪ್, ಕಟ್ಟಡಗಳ ನಿರ್ಮಾಣ, ಆಸ್ಪತ್ರೆ, ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಂಡಿದೆ. ಅಂತಹ ಮಾರುಕಟ್ಟೆ ವ್ಯವಸ್ಥೆಯನ್ನು ಸೃಷ್ಟಿ ಮಾಡಲಾಗಿದೆ. ಆದರೆ, ಹಲಾಲ್ ಆರೋಗ್ಯಯುತ ಎನ್ನುವುದು ಎಲ್ಲಿಯೂ ಘೋಷಣೆಯಾಗಿಲ್ಲ ಎಂದರು.

ಚಿಂತಕ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ‘ನಾವು ನಮ್ಮ ಮೂಲಸಂಸ್ಕೃತಿ, ಆಚರಣೆಗಳನ್ನು ಪಾಲಿಸಿಕೊಂಡು ಮುಸಲ್ಮಾನರ ವ್ಯವಸ್ಥಿತ ವಂಚನೆಯ ಕಾರ್ಯತಂತ್ರವನ್ನು ಬುಡಮೇಲು ಮಾಡಬೇಕು. ಈ ನಿಟ್ಟಿನಲ್ಲಿ ನಾವು ಅನೇಕ ರೀತಿಯ ತ್ಯಾಗ ಮಾಡಿ ಸಮಾಜದ ರಕ್ಷಣೆಗೆ ನಿಂತಿರುವ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರ ಸೂಚನೆಗಳನ್ನು ಪಾಲಿಸಬೇಕು’ ಎಂದರು.

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕಾರ ಗುರುಪ್ರಸಾದ್ ಗೌಡ ಮಾತನಾಡಿದರು. ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕಾರ ಚಂದ್ರ ಮೊಗೇರ ಸ್ವಾಗತಿಸಿದರು. ಸನಾತನ ಸಂಸ್ಥೆಯ ದಯಾನಂದ್ ಶಂಖನಾದ ಮೊಳಗಿಸಿ ದರು. ಅಭಿನವ ಭಾರತ ಮಿತ್ರಮಂಡಳಿ ಸಂಘಟನೆಯ ಪ್ರಮುಖ ನವೀನ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT