ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಬ್‌ಗೆ ತೆರಳಿದ್ದ ಯುವತಿಯರ ಎದೆ ಮುಟ್ಟಿ ಕಿರುಕುಳ: ನಾಲ್ವರ ಬಂಧನ

Published : 6 ಆಗಸ್ಟ್ 2024, 7:24 IST
Last Updated : 6 ಆಗಸ್ಟ್ 2024, 7:24 IST
ಫಾಲೋ ಮಾಡಿ
Comments

ಮಂಗಳೂರು: ಪಾಂಡೇಶ್ವರದ ಫೋರಮ್ ಮಾಲ್‌ನಲ್ಲಿರುವ ಷೆರ್ಲಾಕ್ ಪಬ್‌ಗೆ ತೆರಳಿದ್ದ ಯುವತಿಯರಿಬ್ಬರ ಎದೆಮುಟ್ಟಿ, ಚುಡಾಯಿಸಿ ಲೈಂಗಿಕ ಕಿರುಕುಳ ನೀಡಿದ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಪರಸ್ಪರ ಸ್ನೇಹಿತೆಯರಾದ ಇಬ್ಬರು ಯುವತಿಯರು ಶನಿವಾರ ರಾತ್ರಿ ಪಬ್‌ಗೆ ತೆರಳಿದ್ದ ವೇಳೆ ಆರೋಪಿಗಳು ಅವರ ಎದೆ ಭಾಗವನ್ನು ಮುಟ್ಟಿದ್ದಲ್ಲದೇ, ಅವಾಚ್ಯವಾಗಿ ಬೈದು  ಚುಡಾಯಿಸಿದ್ದರು. ಬೀಯರ್ ಬಾಟ್ಲಿಯಲ್ಲಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದರು, ಈ ಬಗ್ಗೆ ಯುವತಿ ನೀಡಿದ ದೂರಿನ ಅನ್ವಯ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

 ಪುತ್ತೂರು ನೆಹರೂ ನಗರದ ಶಿವನಗರದ ವಿನಯ (33 ವರ್ಷ), ಮಹೇಶ್  (27), ವಡ್ನಾರಿನ ಪ್ರೀತೇಶ್ ( 34), ನಿತೇಶ್ (33) ಬಂಧಿತ ಆರೋಪಿಗಳು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT