ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಸುಳ್ಯದ ಮಂಡೆಕೋಲಿನಲ್ಲಿ‌ ಗರಿಷ್ಠ‌ ಮಳೆ

Published 7 ಜುಲೈ 2023, 4:46 IST
Last Updated 7 ಜುಲೈ 2023, 4:46 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಮಂಡೆಕೋಲು ಗ್ರಾಮದಲ್ಲಿ ಕಳೆದ 24. ತಾಸುಗಳಲ್ಲಿ ಗರಿಷ್ಠ ಮಳೆ ದಾಖಲಾಗಿದೆ. ಇಲ್ಲಿ ಜುಲೈ 6ರ ಬೆಳಿಗ್ಗೆ 8.30ರಿಂದ ಜುಲೈ 7ರ ಬೆಳಿಗ್ಗೆ 8.30ರ ಅವಧಿಯಲ್ಲಿ 211.5 ಮಿಲಿಮೀಟರ್ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.

24 ತಾಸುಗಳ ಅವಧಿಯಲ್ಲಿ ಹೆಚ್ಚು‌ ಮಳೆಯಾದ ಮೊದಲ ಹತ್ತು ಪ್ರದೇಶಗಳು ದಕ್ಷಿಣ ಕನ್ನಡ ಜಿಲ್ಲೆಯವು. ಸುಳ್ಯದ ಜಾಲ್ಸೂರಿನಲ್ಲಿ 175.5 ಮಿಮೀ, ಬಂಟ್ವಾಳ ತಾಲ್ಲೂಕಿನ ಸರಪಾಡಿಯಲ್ಲಿ 166 ಮಿಮೀ, ಬಂಟ್ವಾಳ ತಾಲ್ಲೂಕಿನ ಬಡಗಬೆಳ್ಳೂರಿನಲ್ಲಿ 161.5 ಮಿಮೀ, ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರುವಿನಲ್ಲಿ 159.5 ಮಿಮೀ, ಬಂಟ್ವಾಳ ತಾಲ್ಲೂಕಿನ ವಿಟ್ಲಮೂಡನೂರು ಗ್ರಾಮದಲ್ಲಿ 159 ಮಿಮೀ, ಮಂಗಳೂರು ನಗರದ ಮೂಡುಶೆಡ್ಡೆಯಲ್ಲಿ 159ಮಿಮೀ, ಸುಳ್ಯದ ಅಜ್ಜಾವರದಲ್ಲಿ 158 ಮಿಮೀ, ಬಂಟ್ವಾಳ ತಾಲ್ಲೂಕಿನ ಪಿಲಾತಬೆಟ್ಟುವಿನಲ್ಲಿ 155.5 ಮಿಮೀ, ಬಂಟ್ವಾಳ ತಾಲ್ಲೂಕಿನ ಕಾವಳ‌ ಡೂರಿನಲ್ಲಿ 153.5 ಮಿಮೀ ಮಳೆಯಾಗಿದೆ.

ಕೊಡಗು ಜಿಲ್ಲೆ ಮಡಿಕೇರಿಯ‌ ಮದೆ ಗ್ರಾಮದಲ್ಲಿ 150 ಮಿಮೀ ಮಳೆ ಆಗಿದೆ. ಚಿಕ್ಕಮಗಳೂರು ಜಿಲ್ಲೆ‌ ಮೂಡಿಗೆರೆಯ ತ್ರಿಪುರಾದಲ್ಲಿ ಕನಿಷ್ಠ 68.5 ಮಿಮೀ ಮಳೆ ಆಗಿರುವುದಾಗಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT