ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಫಲಿತಾಂಶ

Published 18 ಮಾರ್ಚ್ 2024, 2:21 IST
Last Updated 18 ಮಾರ್ಚ್ 2024, 2:21 IST
ಅಕ್ಷರ ಗಾತ್ರ

ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿ ಮಹಿಷ ಮರ್ದಿನಿ ಕಂಬಳ ಸಮಿತಿ ಹಮ್ಮಿಕೊಂಡಿದ್ದ ‘ವೀರ- ವಿಕ್ರಮ ಜೋಡುಕರೆ ಬಯಲು ಕಂಬಳ’ ಭಾನುವಾರ ಸಮಾರೋಪಗೊಂಡಿತು. ಕೂಟದಲ್ಲಿ 115 ಜತೆ ಕೋಣಗಳು ಭಾಗವಹಿಸಿದ್ದವು.

ಕನೆಹಲಗೆ, ಅಡ್ಡಹಲಗೆಯಲ್ಲಿ ತಲಾ 2 ಜತೆ, ಹಗ್ಗ ಹಿರಿಯ ವಿಭಾಗದಲ್ಲಿ 7, ನೇಗಿಲು ಹಿರಿಯ ವಿಭಾಗದಲ್ಲಿ 15, ಹಗ್ಗ ಕಿರಿಯ ವಿಭಾಗದಲ್ಲಿ 11 ಜತೆ, ನೇಗಿಲು ಕಿರಿಯ ವಿಭಾಗದಲ್ಲಿ 30 ಜತೆ, ನೇಗಿಲು ಸಬ್ ಜೂನಿಯರ್ ವಿಭಾಗದಲ್ಲಿ 48 ಜತೆ ಭಾಗವಹಿಸಿದ್ದವು.

ಫಲಿತಾಂಶ: ಕನೆಹಲಗೆಯಲ್ಲಿ ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ ಅವರ ಕೋಣಗಳು 6.5 ಕೋಲು ನಿಶಾನೆಗೆ ನೀರು ಹಾಯಿಸಿವೆ. ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ.

ಅಡ್ಡ ಹಲಗೆ: ನಾರಾವಿ ಯುವರಾಜ್ ಜೈನ್ ಅವರ ಕೋಣಗಳು ಪ್ರಥಮ, ಹಲಗೆ ಮುಟ್ಟಿದವರು ಭಟ್ಕಳ ಹರೀಶ್.

ದ್ವಿತೀಯ: ನೇರಳಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ ಶೆಟ್ಟಿ, ಹಲಗೆ ಮುಟ್ಟಿದವರು ಭಟ್ಕಳ ಹರೀಶ್

ಹಗ್ಗ ಹಿರಿಯ ಪ್ರಥಮ: ಮಿಜಾರು ಪ್ರಸಾದ್ ನಿಲಯ ಪ್ರಖ್ಯಾತ್ ಶಕ್ತಿ ಪ್ರಸಾದ್ ಶೆಟ್ಟಿ ‘ಎ’, ಓಡಿಸಿದವರು ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ. ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ ‘ಬಿ’, ಓಡಿಸಿದವರು ನಕ್ರೆ ಪವನ್ ಮಡಿವಾಳ.

ಹಗ್ಗ ಕಿರಿಯ ಪ್ರಥಮ: ಶಿಬರೂರು ಮುಟ್ಟಿಕಲ್ಲು ಕೀರ್ತನ್ ರಾಜೇಶ್ ಪಾಣಾರ,ಓಡಿಸಿದವರು ಕಡಂದಲೆ ಮುಡಾಯಿಬೆಟ್ಟು ರೋಹಿತ್ ಪಾಣಾರ, ದ್ವಿತೀಯ: ಕಕ್ಕೆಪದವು ಕಕ್ಯ ಇಂದಿರಾ ಮಹಾಬಲ ರೈ, ಓಡಿಸಿದವರು ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ.

ನೇಗಿಲು ಹಿರಿಯ ಪ್ರಥಮ: ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ, ಓಡಿಸಿದವರು ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ, ದ್ವಿತೀಯ: ಮಾಣಿಗುತ್ತು ಪ್ರಸನ್ನ ರಘುರಾಮ್ ನಾಯ್ಕ, ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ.

ನೇಗಿಲು ಕಿರಿಯ ಪ್ರಥಮ: ಹೆಬ್ರಿ ಮಾಡಿಗೆ ಮನೆ ದಿಲೀಪ್ ಶಿವರಾಮ ಹೆಗ್ಡೆ, ಓಡಿಸಿದವರು ಕಕ್ಕೆಪದವು ಗೌತಮ್ ಗೌಡ, ದ್ವಿತೀಯ ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ ದಿನೇಶ್ ಭಂಡಾರಿ, ಓಡಿಸಿದವರು: ಮಾಳ ಆಧೀಶ್ ಪೂಜಾರಿ.

ನೇಗಿಲು ಸಬ್ ಜೂನಿಯರ್ ಪ್ರಥಮ: ಕನಡ್ತ್ಯಾರು ಕೃಷ್ಣ ಶೆಟ್ಟಿ, ಓಡಿಸಿದವರು ಕಕ್ಕೆಪದವು ಗೌತಮ್ ಗೌಡ, ದ್ವಿತೀಯ: ಪಡು ಸಾಂತೂರು ಕಲ್ಯಾಣಿ ನಿವಾಸ ರಾಮ ದೇಜು ಪೂಜಾರಿ, ಓಡಿಸಿದವರು ಪಡು ಸಾಂತೂರು ಸುಕೇಶ್ ಪೂಜಾರಿ.

ಹೊಕ್ಕಾಡಿಗೋಳಿ ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ:

ಸಿದ್ಧಕಟ್ಟೆ ಸಮೀಪದ ಕೊಡಂಗೆ ವೀರ ವಿಕ್ರಮ ಕಂಬಳ ಸಮಿತಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ‘ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ’ ಕೂಟದಲ್ಲಿ 99 ಜತೆ ಕೋಣಗಳು ಭಾಗವಹಿಸಿದ್ದವು.

ಕನೆಹಲಗೆಯಲ್ಲಿ 1 ಜತೆ, ಅಡ್ಡಹಲಗೆ 3 ಜತೆ, ಹಗ್ಗ ಹಿರಿಯ 6 ಜತೆ, ನೇಗಿಲು ಹಿರಿಯ 11 ಜತೆ, ಹಗ್ಗ ಕಿರಿಯ 12 ಜತೆ, ನೇಗಿಲು ಕಿರಿಯ 36 ಜತೆ, ನೇಗಿಲು ಸಬ್ ಜೂನಿಯರ್ 30 ಜತೆ ಭಾಗವಹಿಸಿದ್ದವು.

ಕನೆಹಲಗೆಯಲ್ಲಿ ಪ್ರಥಮ: ವಾಮಂಜೂರು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ, ಹಲಗೆ ಮುಟ್ಟಿದವರು ಬೈಂದೂರು ಬಾಸ್ಕರ ದೇವಾಡಿಗ.

ಅಡ್ಡ ಹಲಗೆಯಲ್ಲಿ ಪ್ರಥಮ ಹೊಸ್ಮಾರ್ ಸೂರ್ಯಶ್ರೀ ಜ್ಯೋತಿ ಸುರೇಶ್ ಕುಮಾರ್ ಶೆಟ್ಟಿ, ಹಲಗೆ ಮುಟ್ಟಿದವರು ತೆಕ್ಕಟ್ಟೆ ಸುಧೀರ್ ದೇವಾಡಿಗ, ದ್ವಿತೀಯ ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ, ಹಲಗೆ ಮುಟ್ಟಿದವರು ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ.

ಹಗ್ಗ ಹಿರಿಯದಲ್ಲಿ ಪ್ರಥಮ ಮೂಡುಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ‘ಎ’, ಓಡಿಸಿದವರು ಪಣಪೀಲ ಪ್ರವೀಣ್ ಕೋಟ್ಯಾನ್, ದ್ವಿತೀಯ ಮೂಡುಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ‘ಬಿ’, ಓಡಿಸಿದವರು ಬಾರಾಡಿ ನತೀಶ್.

ಹಗ್ಗ ಕಿರಿಯ ಪ್ರಥಮ: ಕಾರ್ಕಳ ನೆಕ್ಲಾಜೆ ಗುತ್ತು ಪ್ರಜ್ವಲ್ ಪ್ರಖ್ಯಾತ್ ಕೋಟ್ಯಾನ್, ಓಡಿಸಿದವರು ಪೆಂರ್ಗಾಲು ಕೃತಿಕ್ ಗೌಡ, ದ್ವಿತೀಯ ಮೂಡುಬಿದಿರೆ ಹೊಸಬೆಟ್ಟು ಏರಿಮಾರು ಬರ್ಕೆ ಚೇತನ್ ಚಂದ್ರಹಾಸ ಸಾಧು ಸನಿಲ್, ಓಡಿಸಿದವರು ಮಾಸ್ತಿಕಟ್ಟೆ ಸ್ವರೂಪ್
ನೇಗಿಲು ಹಿರಿಯ ಪ್ರಥಮ ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ, ಓಡಿಸಿದವರು ಪೆಂರ್ಗಾಲು ಕೃತಿಕ್ ಗೌಡ, ದ್ವಿತೀಯ ಹೊಸ್ಮಾರ್ ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ ‘ಬಿ’, ಓಡಿಸಿದವರು ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ.

ನೇಗಿಲು ಕಿರಿಯ ಪ್ರಥಮ: ಮುನಿಯಾಲ್ ಉದಯ ಕುಮಾರ್ ಶೆಟ್ಟಿ ‘ಎ’, ಓಡಿಸಿದವರು ಮಾಸ್ತಿಕಟ್ಟೆ ಸ್ವರೂಪ್, ದ್ವಿತೀಯ ಮುನಿಯಾಲ್ ಉದಯ ಕುಮಾರ್ ಶೆಟ್ಟಿ ‘ಬಿ’, ಓಡಿಸಿದವರು ಮಾಸ್ತಿಕಟ್ಟೆ ಸ್ವರೂಪ್.

ನೇಗಿಲು ಸಬ್ ಜೂನಿಯರ್ ಪ್ರಥಮ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ, ಓಡಿಸಿದವರು ಕೋರಿಂಜೆ ಅರುಣ್ ಕುಮಾರ್,‌ ದ್ವಿತೀಯ ಕಕ್ಕೆಪದವು ಕಿಂಜಾಲು ಶಾಂಭವಿ ಸಂಜೀವ ಶೆಟ್ಟಿ, ಓಡಿಸಿದವರು ಕಕ್ಕೆಪದವು ಕಿಂಜಾಲು ಪ್ರದೀಪ್ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT