ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು | ಮನೆ ಹಸ್ತಾಂತರ ವಿಳಂಬ: ಜಿಲ್ಲಾಧಿಕಾರಿಗೆ ಮನವಿ

Published 8 ಸೆಪ್ಟೆಂಬರ್ 2023, 11:34 IST
Last Updated 8 ಸೆಪ್ಟೆಂಬರ್ 2023, 11:34 IST
ಅಕ್ಷರ ಗಾತ್ರ

ಬದಿಯಡ್ಕ: ಎಣ್ಮಕಜೆ ಗ್ರಾಮ ಪಂಚಾಯಿತಿಯ ಸಾಯಿ ಗ್ರಾಮದಲ್ಲಿ ಸಾಯಿ ಟ್ರಸ್ಟ್‌ನಿಂದ 36, ಜೋಯ್ ಅಲುಕಾಸ್‌ ಸಹಯೋಗದಲ್ಲಿ 7 ಮನೆಗಳು ನಿರ್ಮಾಣಗೊಂಡು ಮೂರು ವರ್ಷ ಕಳೆದಿದೆ. ಈ ಮನೆಗಳನ್ನು ಕೂಡಲೇ ಫಲಾನುಭವಿಗಳಿಗೆ ಹಸ್ತಾಂತರಿಸಬೇಕೆಂದು ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿ ಕಾಸರಗೋಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

9 ವರ್ಷಗಳ ಹಿಂದೆ ಆರಂಭವಾದ ಈ ಗೃಹ ನಿರ್ಮಾಣ ಯೋಜನೆಯು 2020ರಲ್ಲಿ ಪೂರ್ಣಗೊಂಡಿದೆ. ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಇರುವವರಿಗೆ ಮನೆಯ ಹಕ್ಕು ಪತ್ರ ನೀಡುವ ಕಾರ್ಯ ಪೂರ್ಣಗೊಂಡಿದೆ ಎನ್ನಲಾಗಿದೆ. ಈ ಮನೆಗಳಿಗೆ ವಿದ್ಯುತ್‌ ಸಂಪರ್ಕ, ನೀರಾವರಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಆದರೂ ಉದ್ಘಾಟನೆ ವಿಳಂಬವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಿಯೋಗದಲ್ಲಿ ಎಣ್ಮಕಜೆ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಮಂಡಲ ಅಧ್ಯಕ್ಷ ಬಿ.ಎಸ್‌.ಗಾಂಭೀರ್, ಮುಖಂಡರಾದ ವಿಲ್ಫ್ರೆಡ್‌ ಡಿಸೋಜ, ಮಾಯಿಲ ನಾಯ್ಕ, ನಾರಾಯಣ ನಾಯ್ಕ ಭಾಗವಹಿಸಿದ್ದರು. ಮನೆಗಳ ಪರಿಸರವನ್ನು ಕಳೆದ ವರ್ಷ ಸುಮಾರು 1 ಸಾವಿರ ಮಂದಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT