ಶನಿವಾರ, ಏಪ್ರಿಲ್ 1, 2023
29 °C

ಅಕ್ರಮ ಗೋ ಸಾಗಾಟ: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ತಂಗಡಿ: ಅಳದಂಗಡಿ ಸಮೀಪ ಓಮ್ನಿ ಕಾರಿನಲ್ಲಿ ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ಪ್ರಕರಣವೊಂದನ್ನು ಬುಧವಾರ ಬೆಳಗ್ಗಿನ ಜಾವ ವೇಣೂರು ಪೊಲೀಸರು ಪತ್ತೆ ಹಚ್ಚಿದ್ದು ಐವರು ಆರೋಪಿಗಳನ್ನು ಬಂಧಿಸಿ ಐದು ಜಾನುವಾರು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕರಾಯ ನಿವಾಸಿ ತೌಸೀಫ್ (32), ಪುತ್ತಿಲ ನಿವಾಸಿ ಉಸ್ಮಾನ್ (55), ಉಪ್ಪಿನಂಗಡಿ ವಳಾಲು ನಿವಾಸಿ ಇಕ್ಬಾಲ್ (34), ಕರಾಯ ನಿವಾಸಿ ಇರ್ಫಾನ್ (25) ಮತ್ತು ಕರಾಯ ನಿವಾಸಿ ಅನಸ್ (23) ಬಂಧಿತರು.

ವೇಣೂರು ಎಸ್.ಐ ಸೌಮ್ಯ ಹಾಗೂ ತಂಡ ರಾತ್ರಿಯ ವೇಳೆ ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಬಂದವರನ್ನು ವಿಚಾರಿಸಲಾಗಿದೆ. ಕಾರು ಪರಿಶೀಲಿಸಿದಾಗ ಸಾಗಿಸುತ್ತಿದ್ದುದು ಕಂಡು ಬಂದಿದೆ. ಓಮ್ನಿಯಲ್ಲಿ ಕೈ ಕಾಲುಗಳನ್ನು ಕಟ್ಟಿ ಹಿಂಸೆ ಮಾಡಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ವಶಪಡಿಸಿಕೊಂಡ ವಸ್ತುಗಳ ಮೌಲ್ಯ ₹ 1,90,000 ಎಂದು ಅಂದಾಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು