ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟಕ ಸಂಗ್ರಹ: ಇಬ್ಬರ ಬಂಧನ

Last Updated 19 ಸೆಪ್ಟೆಂಬರ್ 2021, 4:28 IST
ಅಕ್ಷರ ಗಾತ್ರ

ಮಂಗಳೂರು: ಪರವಾನಗಿ ಇಲ್ಲದೆ ಪಟಾಕಿ ತಯಾರಿಕೆಗೆ ಬಳಕೆಯಾಗುವ ಸ್ಫೋಟಕ ರಾಸಾಯನಿಕ ಸಂಗ್ರಹಿಸಿಟ್ಟಿದ್ದ ಖಚಿತ ಮಾಹಿತಿ ಮೇರೆಗೆ ಕುಳಾಯಿ ಗ್ರಾಮದ ವಿದ್ಯಾನಗರದ ಶೆಡ್ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿ, ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ವಿದ್ಯಾನಗರದ ಗಂಗಾಧರ (53), ಯಾದವ ಬಿ.ಎಂ (48) ಬಂಧಿತರು.‌ ಬಂಧಿತರಿಂದ 600 ಗ್ರಾಂ ಅಲ್ಯೂಮಿನಿಯಂ ಬೀಡ್‌ಗಳು, 9 ಕೆ.ಜಿ ಚಾರ್ಕೋಲ್, 10 ಕೆ.ಜಿ ಗನ್ ಪೌಡರ್, 2 ಕೆ.ಜಿ ಗಂಧಕದ ಗಟ್ಟಿ, 4 ಕೆ.ಜಿ ಗಂಧಕದ ಪೌಡರ್, 11 ಕೆ.ಜಿ ಸೆಣಬಿನ ಹುರಿ, ಸುರುಳಿ ಮಾಡಿದ ಸಣ್ಣ ಪೇಪರ್‌ಗಳು, ದೊಡ್ಡ ಪೇಪರ್‌ಗಳು, ವೃತ್ತಾಕಾರದ ಮರದ ಕೋಲು, ಕಬ್ಬಿಣದ ಕೋಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ಅನುಮತಿ ಇಲ್ಲದೆ, ನಾಲ್ಕು ವರ್ಷಗಳಿಂದ ಪಟಾಕಿ ತಯಾರಿಸುತ್ತಿದ್ದರು. ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ನಿರ್ದೇಶನದಲ್ಲಿ ಸುರತ್ಕಲ್ ಪೊಲೀಸ್ ನಿರೀಕ್ಷಕ ಚಂದ್ರಪ್ಪ ಕೆ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT