ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾಜಸೇವೆಗೆ ಹೃದಯವಂತಿಕೆಯೂ ಅಗತ್ಯ: ಫಾ.ವಿಕ್ಟರ್ ಡಿಮೆಲ್ಲೊ

Published 19 ಮೇ 2024, 13:10 IST
Last Updated 19 ಮೇ 2024, 13:10 IST
ಅಕ್ಷರ ಗಾತ್ರ

ಮುಡಿಪು: ಸಮಾಜ ಸೇವೆಗೂ ಹೃದಯವಂತಿಕೆ, ಒಳ್ಳೆಯ ಮನಸ್ಸು ಬೇಕು. ಆಗ ಮಾತ್ರ ಸಮಾಜಮುಖಿ ಕೆಲಸಗಳು ಪ್ರಾಮಾಣಿಕವಾಗಿ ನಡೆಯಲು ಸಾಧ್ಯ ಎಂದು ಪನೀರ್ ಚರ್ಚ್ ಧರ್ಮಗುರು ಫಾ.ವಿಕ್ಟರ್ ಡಿಮೆಲ್ಲೊ ಹೇಳಿದರು.

ಅಸೈಗೋಳಿಯಲ್ಲಿ ನೂತನ‌ ಸಮಾಜ ಸೇವಾ ಸಂಸ್ಥೆ ಕಾರುಣ್ಯ ಫೌಂಡೆಷನ್ ಉದ್ಘಾಟನೆ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ವಿತರಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸಾಧಕರನ್ನು ಗುರುತಿಸುವುದರೊಂದಿಗೆ, ‌ಬಡ ಜನರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಕಲ್ಪಿಸಲು ಆರಂಭಗೊಂಡಿರುವ ಕಾರುಣ್ಯ ಫೌಂಡೇಷನ್ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲಿ ಎಂದರು.

‌ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಹರೇಕಳ ಮಾತನಾಡಿ, ನೊಂದವರ ಕಣ್ಣೀರೋರೆಸುವ ಕಾರ್ಯ ಪುಣ್ಯದ ಕೆಲಸವಾಗಿದೆ. ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಮಾಡುವ ದುಂದುವೆಚ್ಚದ ನಡುವೆ ಸಮಾಜಸೇವೆಗೂ ಒಂದು ಪಾಲು ಮೀಸಲಿಡಬೇಕು ಎಂದರು.

ಜಮೀಯತ್‌ಉಲ್‌ ಫಲಾಹ್ ಅಧ್ಯಕ್ಷ ಅಬ್ದುಲ್ ನಾಸೀರ್ ಕೆ.ಕೆ. ಮಾತನಾಡಿದರು.

ನಿವೃತ್ತ ಶಿಕ್ಷಕ ಆನಂದ ಅಸೈಗೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಕಾಶ್ ಮಾಡೂರು, ಅಲ್ವಿನ್ ಡಿಸೋಜ, ಬದ್ರುದ್ದೀನ್ ಫರೀದ್ ನಗರ, ಲೂಕಸ್ ಡಿಸೋಜ, ಸುಧಾಕರ್ ನಾಯಕ್, ಚೆನ್ನಪ್ಪ ಕೊಂಡಾಣ, ನಿರ್ಮಾ ಡಿಸೋಜಾ ಅವರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ‌ ಸಾಮಗ್ರಿ ವಿತರಿಸಲಾಯಿತು.

ಪ್ರಾದೇಶಿಕ ಸಾರಿಗೆ ನಿವೃತ್ತ ಅಧಿಕಾರಿ ರಮೇಶ್ ವಣೇಕರ್, ನಾಗರಾಜ್, ಪನೀರು ಚರ್ಚ್ ಉಪಾಧ್ಯಕ್ಷೆ ಸರಿತಾ ಡಿಸೋಜ,‌ ಸಮಾಜ ಸೇವಕಿ ನಾಗವೇಣಿ ಶೆಟ್ಟಿ, ಜೆಸಿಐ ಪೂರ್ವಾಧ್ಯಕ್ಷ ಫ್ರಾಂಕಿ ಪ್ರಾನ್ಸಿಸ್ ಡಿಸೋಜ, ಕೊಣಾಜೆ ವಿ.ಸಹಕಾರಿ ಸಂಘದ ಉಪಾಧ್ಯಕ್ಷ ಭಾಸ್ಕರ್ ಅರಸರ ಮೂಲೆ, ಉದ್ಯಮಿ ಸುಮಿತ್ ಸಾಮಾಣಿ, ಜೆಸಿಐ ಅಧ್ಯಕ್ಷರಾದ ಕವಿತಾ ಸನಿಲ್, ಜ್ಯೋತಿ ಕೋಟ್ಯಾನ್ ಭಾಗವಹಿಸಿದ್ದರು.

ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ತ್ಯಾಗಂ‌ ಹರೇಕಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಅರುಣ್ ಡಿಸೋಜ ವಂದಿಸಿದರು. ಶಿಕ್ಷಕರಾದ ಹರೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ವಿಠಲ್ ನಾಯಕ್ ಅವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT