ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಜೈಶಂಕರ್‌ ಜೊತೆ ಸಿಟಿಜನ್ಸ್‌ ಕೌನ್ಸಿಲ್‌ ಮಂಗಳೂರು ಘಟಕದ ಸಂವಾದ 19ಕ್ಕೆ

Published 18 ಏಪ್ರಿಲ್ 2024, 5:50 IST
Last Updated 18 ಏಪ್ರಿಲ್ 2024, 5:50 IST
ಅಕ್ಷರ ಗಾತ್ರ

ಮಂಗಳೂರು: ಸಿಟಿಜನ್ಸ್‌ ಕೌನ್ಸಿಲ್‌ನ ಮಂಗಳೂರು ಘಟಕವು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಜೊತೆ ಇದೇ 19ರಂದು ಬೆಳಿಗ್ಗೆ 10.30ರಿಂದ ನಗರದ ಟಿ.ವಿ.ರಮಣಪೈ ಸಮಾವೇಶ ಕೇಂದ್ರದಲ್ಲಿ ಸಂವಾದವನ್ನು ಏರ್ಪಡಿಸಿದೆ.

ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದ ಜೈಶಂಕರ್‌ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಪರಿಣತಿ ಹೊಂದಿದ್ದಾರೆ. ಅಮೆರಿಕ, ಜೆಕ್‌ ಗಣರಾಜ್ಯ ಮತ್ತು ಚೀನಾ ದೇಶಗಳಲ್ಲಿ ಭಾರತದ ರಾಯಭಾರಿಯಾಗಿ, ಸಿಂಗಪುರದಲ್ಲಿ ಹೈಕಮಿಷನರ್‌ ಆಗಿ ಕಾರ್ಯನಿರ್ವಹಿಸಿರುವ ಅವರು 2015ರಿಂದ 18ರವರೆಗೆ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು. 

ಭಾರತದ ವಿದೇಶಾಂಗ ನೀತಿಯ ದೃಷ್ಟಿಕೊನಗಳು, ಪ್ರಾದೇಶಿಕ ಆಗುಹೋಗುಗಳು, ಜಾಗತಿಕ ಪಾಲುಗಾರಿಕೆ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪಾತ್ರ ಕುರಿತು ಅವರು ಬೆಳಕು ಚೆಲ್ಲಲಿದ್ದಾರೆ ಎಂದು ಸಿಟಿಜನ್ಸ್‌ ಕೌನ್ಸಿಲ್‌ನ ಮಂಗಳೂರು ಘಟಕದ ಸಂಚಾಲಕ ಅಭಿಷೇಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT