ಭಾನುವಾರ, ಡಿಸೆಂಬರ್ 8, 2019
19 °C
ಪ್ರಕಾಶ್‌ ರೈ ವಿರುದ್ಧ ಪ್ರತಿಭಟಿಸಲು ಸಜ್ಜಾಗಿದ್ದ ಆರೋಪಿಗಳು

ಜನನುಡಿಗೆ ಅಡ್ಡಿಪಡಿಸಲು ಯತ್ನ ಆರೋಪ: ನಾಲ್ವರು ‘ಹಿಂಜಾವೇ’ ಕಾರ್ಯಕರ್ತರು ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜನನುಡಿ ಕಾರ್ಯಕ್ರಮದ ಸಭಾಂಗಣಕ್ಕೆ ಪ್ರವೇಶಿಸಲು ಯತ್ನಿಸಿದ ಹಿಂದೂ ಜಾಗರಣ ವೇದಿಕೆಯ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌.

ನಗರದ ನಂತೂರು ವೃತ್ತದಲ್ಲಿರುವ ಶಾಂತಿ ಕಿರಣದಲ್ಲಿ ಅಭಿಮತ ಸಂಘಟನೆ ವತಿಯಿಂದ ಎರಡು ದಿನಗಳ ಜನನುಡಿ- 2018 ಆಯೋಜಿಸಲಾಗಿದೆ‌. ಇದೀಗ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದು, ಇದೇ ವೇಳೆ ಶಾಂತಿ ಕಿರಣ ಆವರಣ ಪ್ರವೇಶಿಸಲು ಹಿಂದೂ ಜಾಗರಣ ವೇದಿಕೆಯ ನಾಲ್ವರು ಯತ್ನಿಸಿದರು.

‘ಶರತ್, ಸುಭಾಷ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಸಂಶಯಾಸ್ಪದ ರೀತಿಯಲ್ಲಿ ಕಾರ್ಯಕ್ರಮ ಸ್ಥಳಕ್ಕೆ ತೆರಳಲು ಯತ್ನಿಸುತ್ತಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ' ಎಂದು ಪೊಲೀಸ್ ಅಧಿಕಾರಿಗಳು 'ಪ್ರಜಾವಾಣಿ'ಗೆ ತಿಳಿಸಿದರು.

ಆರೋಪಿಗಳು ನಟ ಪ್ರಕಾಶ್ ರೈ ವಿರುದ್ಧ ಪ್ರತಿಭಟಿಸಲು ಸಜ್ಜಾಗಿ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಸಂವಿಧಾನದ ಮೇಲೆ ದಾಳಿ; ದೇಶದಲ್ಲೀಗ ಸಾಮಾಜಿಕ ಭಯೋತ್ಪಾದನೆ ಯುಗ: ನಾಗಮೋಹನ್ ದಾಸ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು