ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಡಾ.ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ- ಬಾಲವನ ಪ್ರಶಸ್ತಿ ಪ್ರದಾನ

Published 11 ಅಕ್ಟೋಬರ್ 2023, 4:41 IST
Last Updated 11 ಅಕ್ಟೋಬರ್ 2023, 4:41 IST
ಅಕ್ಷರ ಗಾತ್ರ

ಪುತ್ತೂರು: ಜ್ಞಾನಪೀಠ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ ಮತ್ತು ಕಾರಂತರ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ ಅವರ ಕರ್ಮಭೂಮಿಯಾಗಿದ್ದ ಪುತ್ತೂರಿನ ಪರ್ಲಡ್ಕದ ಬಾಲವನದಲ್ಲಿ ಮಂಗಳವಾರ ನಡೆಯಿತು.

ವರ್ಣ ಚಿತ್ರಕಲಾವಿದ ಕೆ.ಚಂದ್ರನಾಥ ಆಚಾರ್ಯ ಅವರಿಗೆ ಕಾರಂತರ ಬಾಲವನ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಂಪತಿ ಸಮೇತರಾಗಿ ಅವರು ಗೌರವ ಸ್ವೀಕರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, 40 ವರ್ಷ ಪುತ್ತೂರಿನ ಬಾಲವನವನ್ನು ಕರ್ಮಭೂಮಿಯಾಗಿಸಿಕೊಂಡಿದ್ದ ಶಿವರಾಮ ಕಾರಂತರು ಬೆಳೆದ ಪುಣ್ಯದ ಮಣ್ಣಿನಲ್ಲಿ ಬದುಕುತ್ತಿದ್ದೇವೆ ಎಂದರು.

ಬಾಲವನ ಇನ್ನಷ್ಟು ಅಭಿವೃದ್ಧಿಯಾಗಬೇಕಿದ್ದು, ಕಾರಂತರ ಒಡನಾಡಿಗಳು, ಅವರ ಕುರಿತು ತಿಳಿದವರಿಂದ ಮಾಹಿತಿ ಸಂಗ್ರಹಿಸಿ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾರಂತರ ಸ್ಮರಣೆ ಮಾಡಿದ ಮುಂಬೈ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ತಾಳ್ತಜೆ ವಸಂತಕುಮಾರ್, ಕಾರಂತರೆಂದರೆ ಕಡಲು, ಪರ್ವತದಂತೆ ವಿಸ್ತಾರವಾದವರು. ಅವರ ಒಟ್ಟು ಬಿಂಬವನ್ನು ಕಾಲಮಾನದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಪ್ರಾದೇಶಿಕ ನೆಲೆ, ವಾಸ್ತವ, ಅಲೌಕಿಕ ಅಂಶ ಮೊದಲಾದವುಗಳೇ ಅವರ ಬರಹಗಳ ಜೀವಾಳ. ತುಳುನಾಡಿನ ಯಕ್ಷಗಾನವನ್ನು ಅಂತರರಾಷ್ಟ್ರೀಯ ಮಟ್ಟದ ಕಲೆಯಾಗಿ ಬೆಳೆಸಿದ ಕಾರಂತರು ಹಲವು ವಿಷಯಗಳಲ್ಲಿ ಮೇಲ್ಮಟ್ಟದ ಛಾಪು ಮೂಡಿಸಿದವರು ಎಂದರು.

ವರ್ಣ ಚಿತ್ರಕಲಾವಿದ ಕೆ.ಚಂದ್ರನಾಥ ಆಚಾರ್ಯ ಅವರಿಗೆ ದಿ.ಕುರುಂಜಿ ವೆಂಕಟರಮಣ ಗೌಡ ಅವರ ಶಾಶ್ವತ ಕೊಡುಗೆಯಲ್ಲಿ ನೀಡಲಾಗುವ ₹ 25 ಸಾವಿರ ನಗದು ಬಹುಮಾನವುಳ್ಳ ಕೋಟ ಶಿವರಾಮ ಕಾರಂತರ ಬಾಲವನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕಾರಂತರ ಒಡನಾಡಿಯಾಗಿದ್ದ ಪಡಾರು ಮಹಾಬಲೇಶ್ವರ ಭಟ್ ಮಂಚಿ ಅವರನ್ನು ಗೌರವಿಸಲಾಯಿತು.

ಪ್ರಶಸ್ತಿ ಸಮಿತಿ ಸದಸ್ಯರಾದ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವರದರಾಜ ಚಂದ್ರಗಿರಿ ಅಭಿನಂದನಾ ನುಡಿಗಳನ್ನಾಡಿದರು.

ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ತಹಶೀಲ್ದಾರ್ ಶಿವಶಂಕರ್, ನಗರಸಬೆ ಪೌರಾಯುಕ್ತ ಮಧು ಎಸ್.ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಇದ್ದರು.

ಶಾಲಿನಿ ಶೆಟ್ಟಿ ಮತ್ತು ಬಳಗದವರು ಪ್ರಾರ್ಥನೆ ಹಾಗೂ ಶುಭಾರಾವ್ ಮತ್ತು ಬಳಗದವರು ನಾಡಗೀತೆ ಹಾಡಿದರು. ಬಾಲವನ ಸಮಿತಿ ಅಧ್ಯಕ್ಷ, ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ.ವಂದಿಸಿದರು. ರಾಜೇಶ್ ಬೆಜ್ಜಂಗಳ ನಿರೂಪಿಸಿದರು. ಶಿಕ್ಷಕರಾದ ರಮೇಶ್ ಉಳಯ ಹಾಗೂ ಜಗನ್ನಾಥ ಅರಿಯಡ್ಕ ಕಾರ್ಯಕ್ರಮ ಸಂಯೋಜಿಸಿದ್ದರು.

ಪುತ್ತೂರಿನ ಪರ್ಲಡ್ಕದ ಬಾಲವನದಲ್ಲಿ ಮಂಗಳವಾರ ನಡೆದ ಕೋಟ ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ ಮತ್ತು ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶಾಸಕ ಅಶೋಕ್‌ಕುಮಾರ್‌ ರೈ ಉದ್ಘಾಟಿಸಿದರು
ಪುತ್ತೂರಿನ ಪರ್ಲಡ್ಕದ ಬಾಲವನದಲ್ಲಿ ಮಂಗಳವಾರ ನಡೆದ ಕೋಟ ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ ಮತ್ತು ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶಾಸಕ ಅಶೋಕ್‌ಕುಮಾರ್‌ ರೈ ಉದ್ಘಾಟಿಸಿದರು

ಪುತ್ತೂರಿನ ಮಣ್ಣಿಗೆ ವಿಶೇಷ ಶಕ್ತಿ ಇದೆ. ಎಷ್ಟೋ ಸಾಧಕ ಮಹಾನುಭಾವರು ಪುತ್ತೂರಿನವರು. ಶಾಂತಿನಿಕೇತನದ ಗುರು ಪ್ರೊ.ಕೆ.ಜಿ.ಸುಬ್ರಹ್ಮಣ್ಯ ಅವರು ಕೂಡ ಪುತ್ತೂರಿನವರು ಎಂಬುದು ಹಲವರಿಗೆ ತಿಳಿದಿಲ್ಲ. ನಾನು 9ನೇ ತರಗತಿಯಲ್ಲಿರುವಾಗಲೇ ಚಿತ್ರಕಲೆಗೆ ಸಂಬಂಧಿಸಿ ಕಾರಂತರಿಂದ ಬೈಸಿಕೊಂಡವನು. ಭಾರತೀಯ ಚಿತ್ರಕಲೆಗೆ ದೊಡ್ಡ ಮಟ್ಟದ ಮಹತ್ವವಿದ್ದು, ಹುಟ್ಟೂರಿನಲ್ಲಿ ಕಾರಂತರ ಹೆಸರಿನ ಪ್ರಶಸ್ತಿ ಲಭಿಸಿರುವುದು ನೊಬೆಲ್ ಪಾರಿತೋಷಕ ಸಿಕ್ಕಷ್ಟು ಖುಷಿಯಾಗಿದೆ ಎಂದು ಚಂದ್ರನಾಥ ಆಚಾರ್ಯ ತಿಳಿಸಿದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಮತ್ತು ಬಳಗದವರಿಂದ ಭರತನಾಟ್ಯ, ವೀರಮಂಗಲ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಯಕ್ಷಗಾನ, ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯ ಮಕ್ಕಳಿಂದ ನಾಟಕ ಮತ್ತು ಬಾಲವನದ ಮಹಿಳಾ ಯಕ್ಷ ಬಳಗದಿಂದ ಯಕ್ಷಗಾನ ಪ್ರದರ್ಶನಗೊಂಡಿತು.

Graphic text / Statistics - ಪುತ್ತೂರು: ಕಡಲ ತಡಿಯ ಭಾರ್ಗವ ಖ್ಯಾತಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕೋಟ ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ ಮತ್ತು ಕಾರಂತರ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ ಅವರ ಕರ್ಮಭೂಮಿಯಾಗಿದ್ದ ಪುತ್ತೂರಿನ ಪರ್ಲಡ್ಕದ ಬಾಲವನದಲ್ಲಿ ಮಂಗಳವಾರ ನಡೆಯಿತು. ಕನರ್ಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಮಟ್ಟದ ವರ್ಣ ಚಿತ್ರಕಲಾವಿದ ಕೆ. ಚಂದ್ರಕಾಂತ ಆಚಾರ್ಯ ಅವರಿಗೆ ಕಾರಂತರ ಬಾಲವನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಂಪತಿ ಸಮೇತರಾಗಿ ಗೌರವಿಸಲಾಯಿತು. ರಾಜ್ಯ ಸಕರ್ಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುತ್ತೂರಿನ ಡಾ.ಕೋಟ ಶಿವರಾಮ ಕಾರಂತರ ಬಾಲವನ ಮತ್ತು ಪುತ್ತೂರು ಉಪವಿಭಾಗಾಧಿಕಾರಿಗಳ ಕಾಯರ್ಾಲಯದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಸಂಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಉಪದೇಶ ಕಡಿಮೆ ಮಾಡಿ ಸಾಧನೆಯ ಮೂಲಕ ಸಮಾಜದಲ್ಲಿ ಬದುಕಿ ತೋರಿಸಬೇಕೆಂಬುದನ್ನು ಪಾಲಿಸಿದ ಡಾ. ಶಿವರಾಮ ಕಾರಂತರು 427 ಕ್ಕೂ ಅಧಿಕ ಕೃತಿಗಳನ್ನು ಬರೆದ ಸಾಧಕರು. 40 ವರ್ಷಗಳ ಕಾಲ ಪುತ್ತೂರಿನ ಬಾಲವನವನ್ನು ಕರ್ಮಭೂಮಿಯಾಗಿಸಿಕೊಂಡು ಅವರು ಬೆಳೆದ ಪುತ್ತೂರಿನ ಪುಣ್ಯದ ಮಣ್ಣಿನಲ್ಲಿ ನಾವಿಂದು ಇರುವುದು ನಮ್ಮ ಭಾಗ್ಯ. ಕಲೆಯ ಆಸಕ್ತಿ ಇದ್ದಾಗ ಮಾತ್ರ ಅದರ ಅರಿವು ಮೌಲ್ಯ ತಿಳಿಯಲು ಸಾಧ್ಯ ಎಂದರು. ಬಾಲವನ ಇನ್ನಷ್ಟು ಅಭಿವೃದ್ಧಿಯಾಗಬೇಕು ವಿಶ್ವಕ್ಕೇ ಸಾಧಕರಾಗಿ ಗುರುತಿಸಿಕೊಂಡ ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಬಾಲವನ ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದ ಅವರು ಕಾರಂತರ ಒಡನಾಡಿಗಳು ಅವರ ಕುರಿತು ತಿಳಿದವರಿಂದ ಮಾಹಿತಿ ಪಡೆದುಕೊಂಡು ಮುಂದಿನ ಪೀಳಿಗೆಗೆ ಕಾರಂತರ ಸಾಧನೆ ತಿಳಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಅನುದಾನಕ್ಕಾಗಿ ಸಕರ್ಾರಕ್ಕೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಕಾರಂತ ಸ್ಮರಣೆ ಮಾಡಿದ ಮುಂಬೈ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ್ ಅವರು ಕಾರಂತರೆಂದರೆ ಕಡಲು ಸಮುದ್ರ ಪರ್ವತದಂತೆ ವಿಸ್ತಾರವಾದವರು. ಅವರ ಒಟ್ಟು ಬಿಂಬವನ್ನು ಕಾಲಮಾನದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಪ್ರಾದೇಶಿಕ ನೆಲೆ ವಾಸ್ತವ ಅಲೌಕಿಕ ಅಂಶ ಮೊದಲಾದವುಗಳೇ ಅವರ ಬರಹಗಳ ಜೀವಾಳ. ತುಳುನಾಡಿನ ಯಕ್ಷಗಾನವನ್ನು ಅಂತಾರಾಷ್ಟ್ರೀಯ ಮಟ್ಟದ ಕಲೆಯಾಗಿ ಬೆಳೆಸಿದ ಕಾರಂತರು ಹತ್ತು ಹಲವು ವಿಷಯಗಳಲ್ಲಿ ಮೇಲ್ಮಟ್ಟದ ಛಾಪು ಮೂಡಿಸಿದವರು ಎಂದರು. ವರ್ಣ ಚಿತ್ರಕಲಾವಿದ ಕೆ. ಚಂದ್ರಕಾಂತ ಆಚಾರ್ಯ ಅವರಿಗೆ ದಿವಗಂತ ಕುರುಂಜಿ ವೆಂಕಟರಮಣ ಗೌಡ ಅವರ ಶಾಶ್ವತ ಕೊಡುಗೆಯಲ್ಲಿ ಕೊಡ ಮಾಡುವ ರೂ. 25 ಸಾವಿರ ನಗದು ಬಹುಮಾನವುಳ್ಳ ಕೋಟ ಶಿವರಾಮ ಕಾರಂತರ ಬಾಲವನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶಾಲು ಹೊದಿಸಿ ಹಾರ ಹಾಕಿ ಪೇಟ ತೊಡಿಸಿ ಫಲಕಫಲಪುಷ್ಪಗಳೊಂದಿಗೆ ಸನ್ಮಾನಿಸಲಾಯಿತು. ಅವರ ಪತ್ನಿ ಜತೆಗಿದ್ದರು. ಡಾ. ಕಾರಂತರ ಒಡನಾಡಿಯಾಗಿದ್ದ ಪಡಾರು ಮಹಾಬಲೇಶ್ವರ ಭಟ್ ಮಂಚಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಶಸ್ತಿ ಸಮಿತಿಯ ಸದಸ್ಯರಾದ ಬೆಟ್ಟಂಪಾಡಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅವರು ಅಭಿನಂದನಾ ನುಡಿಗಳನ್ನಾಡಿದರು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಹಶೀಲ್ದಾರ್ ಶಿವಶಂಕರ್ ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಇದ್ದರು. ಶಾಲಿನಿ ಶೆಟ್ಟಿ ಮತ್ತು ಬಳಗದವರು ಪ್ರಾರ್ಥನೆ ಹಾಗೂ ಶುಭಾರಾವ್ ಮತ್ತು ಬಳಗದವರು ನಾಡಗೀತೆ ಹಾಡಿದರು. ಬಾಲವನ ಸಮಿತಿಯ ಅಧ್ಯಕ್ಷರಾದ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಹಾಯಕ ನಿದರ್ೆಶಕ ರಾಜೇಶ್ ಜಿ. ವಂದಿಸಿದರು. ರಾಜೇಶ್ ಬೆಜ್ಜಂಗಳ ನಿರೂಪಿಸಿದರು. ಶಿಕ್ಷಕರಾದ ರಮೇಶ್ ಉಳಯ ಹಾಗೂ ಜಗನ್ನಾಥ ಅರಿಯಡ್ಕ ಕಾರ್ಯಕ್ರಮ ಸಂಯೋಜಿಸಿದ್ದರು. ಬಾಕ್ಸ್ ನ್ಯೂಸ್.... ಪುತ್ತೂರಿನ ಮಣ್ಣಿಗೆ ವಿಶೇಷ ಶಕ್ತಿ ಇದೆ. ಎಷ್ಟೋ ಸಾಧಕ ಮಹಾನುಭಾವರು ಪುತ್ತೂರಿನವರು. ಶಾಂತಿನಿಕೇತನದ ಗುರು ಪ್ರೊ.ಕೆ.ಜಿ. ಸುಬ್ರಹ್ಮಣ್ಯ ಅವರು ಕೂಡ ಪುತ್ತೂರಿನವರು ಎಂಬುದು ಹಲವರಿಗೆ ತಿಳಿದಿಲ್ಲ. ನಾನು 9 ನೇ ತರಗತಿಯಲ್ಲಿರುವಾಗಲೇ ಚಿತ್ರಕಲೆಗೆ ಸಂಬಂಧಿಸಿ ಡಾ. ಕಾರಂತರಿಂದ ಬೈಸಿಕೊಂಡವನು. ಭಾರತೀಯ ಚಿತ್ರಕಲೆಗೆ ದೊಡ್ಡ ಮಟ್ಟದ ಮಹತ್ವದವಿದ್ದು ಹುಟ್ಟೂರಿನಲ್ಲಿ ಡಾ. ಕಾರಂತರ ಹೆಸರಿನ ಪ್ರಶಸ್ತಿ ಲಭಿಸಿರುವುದು ನೊಬೆಲ್ ಪಾರಿತೋಷಕ ಸಿಕ್ಕಷ್ಟು ಖುಷಿಯಾಗಿದೆ- ಚಂದ್ರನಾಥ ಆಚಾರ್ಯ ಬಾಲವನ ಪ್ರಶಸ್ತಿ ಪುರಸ್ಕೃತರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಭಾ ಕಾರ್ಯಕ್ರಮಕ್ಕೆ ಮೊದಲು ಆರ್ಯಭಟ ಪ್ರಶಸ್ತಿ ಪುರಸ್ಕೃತ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಮತ್ತು ಬಳಗದವರಿಂದ ವಿಶೇಷ ಭರತನಾಟ್ಯ ಅಪರಾಹ್ನ ಬಳಿಕ ವೀರಮಂಗಲ ಪಿಎಂಶ್ರೀ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ತಾರನಾಥ ಸವಣೂರು ನಿದರ್ೆಶನದಲ್ಲಿ `ಕೃಷ್ಣ ಲೀಲೆ' ಯಕ್ಷಗಾನ ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯ ಮಕ್ಕಳಿಂದ ಹಿರಿಯ ರಂಗ ಕಲಾವಿದ ಐ.ಕೆ. ಬೋಳುವಾರು ನಿದರ್ೆಶನದಲ್ಲಿ `ಕಾರಂತಜ್ಜನಿಗೊಂದು ಪತ್ರ' ಮಕ್ಕಳ ನಾಟಕ ಮತ್ತು ಸಂಜೆ ಬಾಲವನದ ಮಹಿಳಾ ಯಕ್ಷ ಬಳಗದಿಂದ ಶಾಲಿನಿ ಅರುಣ್ ಶೆಟ್ಟಿ ಸಂಯೋಜನೆಯಲ್ಲಿ `ವೀರಮಣಿ ಕಾಳಗ' ಮಹಿಳಾ ಯಕ್ಷಗಾನ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT