ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಜಾರದ ಸಾನ್ನಿಧ್ಯದಲ್ಲಿ ಜೀರ್ಣೋದ್ಧಾರ ಕಾರ್ಯ

Published 1 ಡಿಸೆಂಬರ್ 2023, 5:18 IST
Last Updated 1 ಡಿಸೆಂಬರ್ 2023, 5:18 IST
ಅಕ್ಷರ ಗಾತ್ರ

ಮಂಗಳೂರು: ಮೂಡುಶೆಡ್ಡೆಯ ಆದಿ ಕ್ಷೇತ್ರ ಜಾರದ ಸಾನ್ನಿಧ್ಯದಲ್ಲಿ ಗುರುವಾರ ಜಾರದ ಕಲ್ಲುರ್ಟಿ ದೈವ, ಸಾರಾಳ ಜುಮಾದಿ (ಧೂಮಾವತಿ) ಬಂಟ ಹಾಗೂ ಪರಿವಾರ ದೈವಗಳಿಗೆ ಶಿಲಾನ್ಯಾಸ, ನಿಧಿಕುಂಭ ಪೂಜೆ ನಡೆದವು.

ಇದೇ ವೇಳೆ ಆದಿ ಜಾರ ಕ್ಷೇತ್ರದ ಜಾರದ ಗಿರಿಯಲ್ಲಿ ಗ್ರಾಮದ ದೈವ ಜಾರಂದಾಯ ಬಂಟ, ಸಾರಾಳ ಜುಮಾದಿ ಬಂಟ ಮತ್ತು ಪರಿವಾರ ದೈವಗಳಿಗೂ ಶಿಲಾನ್ಯಾಸ, ನಿಧಿಕುಂಭ ಪೂಜೆ ಹಾಗೂ ಧಾರ್ಮಿಕ ವಿಧಿಗಳು ನೆರವೇರಿದವು. ಕ್ಷೇತ್ರದ ತಂತ್ರಿಗಳಾದ ಕೊಂರ್ಗೆಲುಬೈಲು ಲಕ್ಷ್ಮಿನಾರಾಯಣ ಮಯ್ಯ  ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮಗಳು ನಡೆದವು.

ದೈವಜ್ಞ ಪ್ರಕಾಶ ವಿ. ಹೊಳ್ಳ ಶಕ್ತಿನಗರ ಅವರು ಧಾರ್ಮಿಕ ವಿಧಿಗಳಿಗೆ ಮಾರ್ಗದರ್ಶನ ನೀಡಿದರು. ಅಂದಾಜು ಮೂರೂವರೆ ಎಕರೆ ಜಾಗದಲ್ಲಿ ಅಂದಾಜು ₹12ರಿಂದ 15 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯಲಿದೆ.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಮಾಜಿ ಸಚಿವ ಬಿ. ರಮಾನಾಥ ರೈ, ಪ್ರಚಾರ ಸಮಿತಿ ಪ್ರಮುಖ ಸತ್ಯಜಿತ್ ಸುರತ್ಕಲ್, ಉದ್ಯಮಿ ಪದ್ಮನಾಭ ಕೋಟ್ಯಾನ್, ಆಶಿಕ್ ಕುಮಾರ್ ಜೈನ್ ಕೂಳೂರುಬೀಡು, ಯಜಮಾನ ಯೋಗೇಂದ್ರನಾಥ ಜಾರ, ಜಾರ ಕ್ಷೇತ್ರದ ಗಡಿ ಪ್ರಧಾನ ಜತ್ತಿ ಪೂಜಾರಿ ಜಾರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉದಯ ಶಂಕರ್ ಜಾರ, ಪ್ರಧಾನ ಕಾರ್ಯದರ್ಶಿ ಎಂ. ವಿಠಲ್ ಪೂಜಾರಿ ಕುಕ್ಕುದಡಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT